Breaking NewsLatestರಾಜಕೀಯರಾಜ್ಯ

ಕೆಆರ್​ಎಸ್ ಬಾಗಿಲಿಗೆ ಸುಮಲತಾರನ್ನು ಅಡ್ಡ ಮಲಗಿಸಿ; ಸೌಜನ್ಯ ಮೀರಿದ ಎಚ್​ಡಿಕೆ ಸಿಟ್ಟು

ಬೆಂಗಳೂರು: ರಾಜಕಾರಣಿಗಳ ಮಾತುಗಳು ಬಹಳ ಸಲ ಸೌಜನ್ಯ ಮೀರುತ್ತವೆ. ಸಂಸದೆ ಸುಮಲತಾ ಕುರಿತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಮತ್ತೊಮ್ಮೆ ಅಂಥದೇ ನಡೆಗೆ ಉದಾಹರಣೆಯಾಗಿದೆ.

ಕೆಆರ್​ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಸುಮಲತಾ ಅವರನ್ನು ಕೆಆರ್​ಎಸ್ ಬಾಗಿಲಿಗೆ ಅಡ್ಡ ಮಲಗಿಸಬೇಕು ಎಂದು ಹೇಳಿದ್ದಾರೆ.

ಮಾಜಿ ಸಿಎಂ ಒಬ್ಬರ ಬಾಯಲ್ಲಿ ಇಂಥ ಮಾತು ಬರುವುದು ಅವರಿಗಾಗಲಿ, ಅವರ ಪಕ್ಷಕ್ಕಾಗಲಿ ಎಷ್ಟು ಶೋಭೆ ತರುವ ವಿಚಾರ ಎಂಬುದನ್ನು ಅವರೇ ಯೋಚಿಸಬೇಕು.

ಆದರೆ, ಎಚ್​ಡಿಕೆ ಮಾತಿಗೆ ಪ್ರತಿಕ್ರಿಯಿಸಿರುವ ಸುಮಲತಾ ಮಾತ್ರ ಸೌಜನ್ಯ ಮೀರದೆ ತಾಳ್ಮೆಯಿಂದಲೇ ಮಾತನಾಡಿದ್ದಾರೆ. ನಾನು ಅವರ ಮಟ್ಟಕ್ಕೆ ಇಳಿದು ಮಾತನಾಡಲಾರೆ. ಅವರ ಧಾಟಿಯಲ್ಅಲಿ ಮಾತನಾಡುವುದು ನನಗೆ ಸಾಧ್ಯವಿಲ್ಲ. ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದಷ್ಟೇ ಸುಮಲತಾ ಹೇಳಿದ್ದಾರೆ.

ಕೆಆರ್​ಎಸ್ ಡ್ಯಾಂ ಕುರಿತ ನನ್ನ ಹೇಳಿಕೆ ಕಾಳಜಿಯಿಂದ ಕೂಡಿದ್ದಾಗಿದೆ. ನಾನು ನನಗಿರುವ ಮಾಹಿತಿಯ ಬಗ್ಗೆ ಮಾತ್ರ ಹೇಲಿದ್ದೇನೆ. ನಾನು ನೇರವಾಗಿಯೇ ಮಾತನಾಡುತ್ತೇನೆ. ನನ್ನ ನೇರ ನಡೆಯೇ ಅವರಿಗೆ ಇಷ್ಟವಾಗದಿದ್ದರೆ ನಾನೇನು ಮಾಡಲಿ ಎಂದು ಸುಮಲತಾ ಹೇಳಿದ್ದಾರೆ.

ನಾನು ಕೆಆರ್​ಎಸ್ ಎದುರು ಇರುವ ಅಪಾಯದ ಬಗ್ಗೆ ಮಾತನಾಡಿದಾಗೆಲ್ಲ, ಅಲ್ಲಿನ ಗಣಿಗಾರಿಕೆಯಿಂದ ಕೆಆರ್​ಎಸ್​ಗೆ ತೊಂದರೆಯಿರುವುದರ ಬಗ್ಗೆ ಹೇಳಿದಾಗೆಲ್ಲ ಎಚ್​ಡಿಕೆ
ಪ್ರತಿಕ್ರಿಸುತ್ತಾರೆ ಎಂದೂ ಸುಮಲತಾ ಹೇಳಿದರು.

ಕೆಆರ್​ಎಸ್ ಜಲಾಶಯದ ರಕ್ಷಣೆ ವಿಚಾರವಾಗಿ ಕೆಂದ್ರದ ಎದುರು ಪ್ರಸ್ಥಾಪಿಸಿರುವೆ. ರಕ್ಷಣೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದೂ ಸುಮಲತಾ ಹೇಳಿದ್ದಾರೆ.

ಈ ಮೊದಲು ಸುಮಲತಾ ಚುನಾವಣೆಗೆ ಸ್ಪರ್ಧಿಸಿದ್ದ ಹೊತ್ತಲ್ಲೂ ಜೆಡಿಎಸ್ ಕಡೆಯಿಂದ ಇಂಥದೇ ಮಾತುಗಳು ಬಂದಿದ್ದವು. ಮಹಿಳೆಯೊಬ್ಬರ ಬಗೆಗಿನ ಕೀಳು ಅಭಿರುಚಿಯ ನಾಯಕರ ಹೇಳಿಕೆಗಳು ವ್ಯಾಪಕ ಟೀಕೆಗೂ ಒಳಗಾಗಿದ್ದವು. ಕಡೆಗೆ ಇಂಥ ಮಾತುಗಳಿಂದಾಗಿಯೇ ಜೆಡಿಎಸ್ ಚುನಾವಣೆಯಲ್ಲಿ ಸೋಲುವಂತಾಯಿತು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ರೈತ ಮಹಿಳೆಯೊಬ್ಬರ ವಿಚಾರವಾಗಿಯೂ ಕುಮಾರಸ್ವಾಮಿ ಮಾತು ಇಂಥದೇ ಕಿಡಿ ಹೊತ್ತಿಸಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button