Breaking NewsLatestಮಂಡ್ಯರಾಜಕೀಯರಾಜ್ಯ

ಅಡ್ಜಸ್ಟ್​ಮೆಂಟ್ ಮಾಡುವುದಾಗಿದ್ದರೆ ಸರ್ಕಾರವನ್ನೇ ಉರುಳಿಸುತ್ತಿದ್ದೆವು; ಪ್ರೀತಂಗೌಡಗೆ ಎಚ್​ಡಿಕೆ ತಿರುಗೇಟು

ಮಂಡ್ಯ: ನಾವು ಅಡ್ಜಸ್ಟ್​ಮೆಂಟ್ ಮಾಡುವುದೇ ಆಗಿದ್ದರೆ ಸರ್ಕಾರವನ್ನೇ ಉರುಳಿಸಬಹುದಿತ್ತು ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ಜೊತೆ ಜೆಡಿಎಸ್ ಅಡ್ಜಸ್ಟ್​ಮೆಂಟ್​ಗಾಗಿ ಕಾಯುತ್ತಿದೆ ಎಂಬ ಹಾಸನ ಶಾಸಕ ಪ್ರೀತಂ ಗೌಡ ಹೆಳಿಕೆಗೆ ಎಚ್​ಡಿಕೆ ಖಾರವಾಗಿಯೇ ಪ್ರತಿಕ್ರಿಸಿದರು.

ಅವರು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಹಾಗೆ ಮಾಡುವುದಾಗಿದ್ದಲ್ಲಿ ಸರ್ಕಾರವನ್ನೇ ಉರುಳಿಸಬಹುದಿತ್ತು. ನಮಗೆ ಅದರ ಅವಶ್ಯಕತೆ ಇಲ್ಲ. ಯಾರೋ ಮಾತನಾಡಿದರು ಎಂದು ಅದಕ್ಕೆಲ್ಲ ನಾನು ಉತ್ತರ ಕೊಡಲಾರೆ ಎಂದು ಕುಮಾರಸ್ವಾಮಿ ಹೇಳಿದರು.

ಹೊಸ ಸಿಎಂ ಮುಂದಿನ 28 ತಿಂಗಳು ಅಧಿಕಾರ ನಿರ್ವಹಿಸಲಿ. ಅವರು ಮುಂದುವರಿಯುತ್ತಾರೊ, ಸಮಸ್ಯೆಗಳು ಎದುರಾಗುತ್ತವೊ ನನಗೆ ಗೊತ್ತಿಲ್ಲ. ಬಿಜೆಪಿಯೊಳಗೇ ಸಮಸ್ಯೆಗಳು ಎದುರಾಗಲೂಬಹುದು ಎಂದು ಎಚ್​ಡಿಕೆ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button