Breaking Newsಇತರ ಕ್ರೀಡೆಕ್ರೀಡೆ
ಶ್ರೀಜೇಶ್ ಗೆ ಯುಎಇ ಉದ್ಯಮಿಯಿಂದ 1 ಕೋಟಿ ರೂ. ಕೊಡುಗೆ

ಹೊಸದಿಲ್ಲಿ : ಭಾರತ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಯುಎಇಯಲ್ಲಿ ನೆಲೆಸಿರುವ ಉದ್ಯಮಿಯೋರ್ವರು 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಯುಎಇಯಲ್ಲಿರುವ ವಿಪಿಎಸ್ ಹೆಲ್ತ್ ಕೇರ್ ಕಂಪೆನಿಯ ಆಡಳಿತ ನಿರ್ದೇಶಕ ಡಾ. ಶಂಶೀರ್ ವಯಾಲಿಲ್ ಅವರು ಈ ಬಹುಮಾನ ಘೋಷಿಸಿದ್ದಾರೆ.
“ಶ್ರೀಜೇಶ್ ಅವರು ಕೊನೆಯ ಕ್ಷಣದಲ್ಲಿ ತೋರಿದ ಪ್ರದರ್ಶನ ಇಡೀ ದೇಶವೇ ಮೆಚ್ಚುವಂಥದ್ದು, ಒಬ್ಬ ಮಲಯಾಳಿಯಾಗಿ ನಾನು ಅವರ ಸಾಧನೆಯನ್ನು ಗೌರವಿಸುತ್ತೇನೆ” ಎಂದು ಡಾ.ಶಂಶೀರ್ ಹೇಳಿದ್ದಾರೆ.
ಶ್ರೀಜೇಶ್ ಕೂಡ ಶಂಶೀರ್ ಅವರಿಗೆ ಧನ್ಯವಾದ ಹೇಳಿದ್ದಾರೆ.
