ಜಮೀನುಗಳ ಪಹಣಿಯಲ್ಲಿ ದೋಷ: ಅನ್ನದಾತರು ಕಂಗಾಲು!

ಕಲಬುರಗಿ: ರೈತರು ತಮ್ಮ ಜಮೀನು ಮಾರಾಟ, ಖರೀದಿ ಮಾಡಬೇಕಾದ್ರೆ, ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕಾದ್ರೆ ಜಮೀನಿನ ಪಹಣಿ ಹೋಲ್ಡಿಂಗ್ ಕರೆಕ್ಟ್ ಆಗಿರಬೇಕು. ಇಲ್ಲದಿದ್ರೆ ಸೌಲಭ್ಯಗಳಿಂದ ವಂಚಿತರಾಗ್ತಾರೆ.
ಆದ್ರೆ ಕಲಬುರಗಿಯ ಆ ಒಂದು ಗ್ರಾಮದ ರೈತರ ಜಮೀನುಗಳ ಪಹಣಿ ದೋಷದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ರು ಅಧಿಕಾರಿಗಳು ಕೇರ್ ಮಾಡದೆ ಇರುವುದಕ್ಕೆ ರೈತರು ಕೆಂಡಮಂಡಲರಾಗಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ಜನರು ಅಧಿಕಾರಿಗಳ ವರ್ತನೆಗೆ ಬೇಸರಗೊಂಡಿದ್ದಾರೆ. ಅನಿವಾರ್ಯವಾಗಿ ಹಲಕರ್ಟಿ ಗ್ರಾಮಸ್ಥರು ಪ್ರತಿಭಟನೆ ಹಾದಿ ತುಳಿಯುವಂತಾಗಿದೆ. ಇದಕ್ಕೆಲ್ಲಾ ಕಾರಣವೇ ಪಹಣಿಯಲ್ಲಿನ ದೋಷ. ಹೌದು ಹಲಕರ್ಟಿ ಗ್ರಾಮದ ರೈತರ ಜಮೀನಿಗೆ ಸಂಬಂಧಪಟ್ಟಂತೆ ಪಹಣಿಯಲ್ಲಿ ಸಾಕಷ್ಟು ದೋಷಗಳಿವೆ. ಒಂದೇ ಸರ್ವೇ ನಂಬರ್, ಒಂದೇ ಹಿಸ್ಸಾ ಜಮೀನಿನ ಪಹಣಿಯಲ್ಲಿ ಇಬ್ಬರು ಮೂವರ ಹೆಸರುಗಳು ಬರುತ್ತಿವೆಯಂತೆ. ಕಟ್ಟಾ ಜಮೀನಿದ್ರು, ಸರ್ಕಾರಿ ಜಮೀನೆಂದು ಪಹಣಿಗಳಲ್ಲಿ ಬರ್ತಿದೆಯಂತೆ. ಹೀಗಾಗಿ ನಾನಾ ರೀತಿಯ ದೋಷಗಳು ಪಹಣಿಯಲ್ಲಿ ಬರುತ್ತಿರೋದ್ರಿಂದ ರೈತರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಜಮೀನು ಮಾರಾಟ ಖರೀದಿ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಬೆಳೆ ಪರಿಹಾರ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳಿಂದ ಹಲಕರ್ಟಿ ಗ್ರಾಮದ ರೈತರು ವಂಚಿತರಾಗುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ಹಲಕರ್ಟಿ ರೈತರು ಪಹಣಿ, ಹೋಲ್ಡಿಂಗ್ ನಲ್ಲಿರುವ ದೋಷ ಸರಿಪಡಿಸುವಂತೆ ಆಗ್ರಹಿಸುತ್ತಿದ್ದಾರೆ.
