Breaking NewsLatestಮೈಸೂರುರಾಜಕೀಯ
ಬಿಎಸ್ಪಿಯಿಂದ ಮೋಸವಾಗಿದೆ; ಬಿಜೆಪಿ ಸೇರಿದ ಎನ್ ಮಹೇಶ್ ಆರೋಪ

ಮೈಸೂರು: ಹೋರಾಟಗಳ ಸಂದರ್ಭದಲ್ಲಿ ಆಡಿದ ಮಾತೇ ಬೇರೆ, ಅಧಿಕಾರ-ಸ್ಥಾನಗಳಿಗೆ ಬಂದಾಗಿನ ಮಾತೇ ಬೇರೆ ಎಂಬುದು ನನಗೆ ಅರ್ಥವಾಗಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‌ಪಿ ಪಕ್ಷದಿಂದ ನನಗೆ ಮೋಸವಾಗಿದೆ. ನನ್ನಿಂದ ಬಿಎಸ್‌ಪಿಗೆ ಮೋಸ ಆಗಿಲ್ಲ. ಬಿಎಸ್‌ಪಿ ನನ್ನ ತಾಯಿ ಪಕ್ಷ ಎಂದು ಹೇಳಿದ್ದೆ. ಆದರೆ, ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು? ಮಗ ಅನಾಥನಾಗಿದ್ದ, ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನ್ನನ್ನು ಟ್ರೋಲ್ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ಬಿಎಸ್‌ಪಿ ಗೆಳೆಯರಿಗೆ ನಾನು ಹೇಳುವುದಿಷ್ಟು. ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನು ಬಿಎಸ್‌ಪಿ ಪಕ್ಷ ಕಟ್ಟಲು ಬಳಸಿ. ನನ್ನನ್ನು ಟ್ರೋಲ್ ಮಾಡುತ್ತಿರುವವರಿಗೆ ಮಲೆ ಮಹದೇಶ್ವರ ಸ್ವಾಮಿ ಒಳೆಯದ್ದನ್ನ ಮಾಡಲಿ ಎಂದರು.
