Breaking NewsLatestರಾಷ್ಟ್ರೀಯಸುದ್ದಿ

ರಾಮ ಭಕ್ತರಿಗೆ ಗುಡ್​ನ್ಯೂಸ್

ಲಖನೌ: ಮುಂದಿನ ದಶಕದಲ್ಲಿ ಅಯೋಧ್ಯೆಯ ದೇಗುಲ ಪಟ್ಟಣವನ್ನು ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲ್ಯಾನ್​ ಅನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನುಮೋದಿಸಿದ್ದಾರೆ.

ಮಾಸ್ಟರ್ ಪ್ಲ್ಯಾನ್​ 133.67 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಸುಮಾರು 12 ಲಕ್ಷ ಜನರ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ಜನರಿಂದ ಬಂದ 1,084 ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ನಂತರ ವಸತಿ ಮತ್ತು ನಗರ ಯೋಜನಾ ಇಲಾಖೆಯು ಮಾಸ್ಟರ್ ಪ್ಲ್ಯಾನ್​ 2031 ಅನ್ನು ಮುಖ್ಯಮಂತ್ರಿಗಳು ಮಂಡಿಸಿದರು.

ವಸತಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಿತಿನ್ ರಮೇಶ್ ಗೋಕರ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ಅಯೋಧ್ಯೆ ಮಾಸ್ಟರ್ ಪ್ಲಾನ್‌ಗೆ ಶೀಘ್ರವಾಗಿ ಅನುಮೋದನೆ ನೀಡಲಾಗಿದೆ. ಫೈಜಾಬಾದ್/ಅಯೋಧ್ಯೆಯ ಅಭಿವೃದ್ಧಿಗೆ ಕೊನೆಯ ಮಾಸ್ಟರ್ ಪ್ಲ್ಯಾನ್​ ಅನ್ನು 1983 ರಲ್ಲಿ ಸಿದ್ಧಪಡಿಸಲಾಗಿತ್ತು. ಅದರ ಅವಧಿ 2001 ರಲ್ಲಿ ಕೊನೆಗೊಂಡಿತ್ತು. ಯೋಗಿ ಸರ್ಕಾರವು ಇತರ ನಗರಗಳಿಗಿಂತ ಮೊದಲು ಅಯೋಧ್ಯೆ 2031 ಮಾಸ್ಟರ್ ಪ್ಲ್ಯಾನ್​ ಅನ್ನು ಅನುಮೋದಿಸಿದೆ ಎಂದು ಹೇಳಿದರು.

ನಗರದಲ್ಲಿ ಸುಮಾರು 4,295 ಮನೆಗಳನ್ನು ಹೊಂದಿರುವ ಏಳು ಕೊಳೆಗೇರಿ ಬಡಾವಣೆಗಳನ್ನು ಪರಿವರ್ತಿಸಲು ಗಮನಹರಿಸುವ ಅಗತ್ಯವಿದೆ ಎಂದು ಮಾಸ್ಟರ್ ಪ್ಲ್ಯಾನ್​ ಸಿದ್ಧಪಡಿಸಿದ ತಜ್ಞರು ತಿಳಿಸಿದ್ದಾರೆ. 2031 ರ ವೇಳೆಗೆ ವಾರ್ಷಿಕವಾಗಿ ನಾಲ್ಕು ಕೋಟಿಗೂ ಹೆಚ್ಚು ಪ್ರವಾಸಿಗರು ನಗರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

Spread the love

Related Articles

Leave a Reply

Your email address will not be published. Required fields are marked *

Back to top button