Breaking NewsLatestಗದಗಜಿಲ್ಲಾ ಸುದ್ದಿ
ಶಾಸಕ ಹೆಚ್. ಕೆ. ಪಾಟೀಲ್ ತಾಯಿ ವಿಧಿವಶ

ಗದಗ: ಶಾಸಕ ಹೆಚ್. ಕೆ ಪಾಟೀಲ್ ರವರ ತಾಯಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಹೆಚ್.ಕೆ ಪಾಟೀಲ್ ತಾಯಿ ಪದ್ಮಾವತಿ ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಪದ್ಮಾವತಿಯವರು ಬಿದ್ದು ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ಆರೋಗ್ಯದಲ್ಲಿ ಏರುಪೇರಾದ ಬಳಿಕ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಪದ್ಮಾವತಿ ಸಾವನ್ನಪ್ಪಿದ್ದಾರೆ. ಸುಮಾರು ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದ ಹೆಚ್.ಕೆ ಪಾಟೀಲ್ ತಾಯಿ, ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ
