Breaking NewsLatestಜಿಲ್ಲಾ ಸುದ್ದಿರಾಷ್ಟ್ರೀಯವಿದೇಶಸುದ್ದಿ

ನ.27 ರಂದು ಭಾರತಕ್ಕೆ ಭೇಟಿ ನೀಡಲಿರುವ ಫ್ರಾನ್ಸ್ ರಕ್ಷಣಾ ಸಚಿವ ಲೆಕೊರ್ನು

ನವೆಂಬರ್ 27 ರಂದು ಫ್ರೆಂಚ್ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೊರ್ನು ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ.

ರಕ್ಷಣಾ ಸಂಸ್ಥೆಯ ಮೂಲಗಳ ಪ್ರಕಾರ, ಫ್ರಾನ್ಸ್‌ ಹೊಸ ರಕ್ಷಣಾ ಸಚಿವರಾಗಿ ನೇಮಕಗೊಂಡ ಲೆಕೊರ್ನು ಅವರು ತಮ್ಮ ಭಾರತೀಯ ಸಹವರ್ತಿ ರಾಜನಾಥ್ ಸಿಂಗ್ ಅವರನ್ನು ನವೆಂಬರ್ 28 ರಂದು ಭೇಟಿಯಾಗಲಿದ್ದಾರೆ.

ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಇನ್ನು ಸ್ಥಳೀಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ ತೆರಳಲಿದ್ದಾರೆ.

ಲೆಕೊರ್ನು ಅವರ ಭೇಟಿಯ ಮುಖ್ಯ ಕಾರ್ಯಸೂಚಿಯು ಇಂಡೋ-ಪೆಸಿಫಿಕ್ ಸಹಕಾರ ಮತ್ತು ಉಭಯ ದೇಶಗಳ ನಡುವಿನ ಸಹಭಾಗಿತ್ವವಾಗಿದ್ದು, ಈ ತಿಂಗಳ ಆರಂಭದಲ್ಲಿ, ಫ್ರೆಂಚ್ ಸರ್ಕಾರವು ಪ್ರಕಟಿಸಿದ ರಕ್ಷಣಾ ಕಾರ್ಯತಂತ್ರದ ವರದಿಯು ಇಂಡೋ-ಪೆಸಿಫಿಕ್‌ನಲ್ಲಿ ಸಮತೋಲನ ಶಕ್ತಿ ಮತ್ತು ಅದರ ದೀರ್ಘಕಾಲದ ಮಿತ್ರ ಭಾರತದೊಂದಿಗೆ ಸಂಬಂಧವನ್ನು ಹೆಚ್ಚಿಸುವ ಅಗತ್ಯವನ್ನು ಕೇಂದ್ರೀಕರಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button