Breaking NewsLatestದಾವಣಗೆರೆರಾಜ್ಯ

10 ಕೋಟಿ 63 ಲಕ್ಷ ರೂ ಚೆಕ್ ಬೌನ್ಸ್ ಪ್ರಕರಣ: ತಮಿಳುನಾಡಿನಲ್ಲಿ ಆರೋಪಿ ಬಂಧಿಸಿ ಕರೆತಂದ ದಾವಣಗೆರೆ ಪೊಲೀಸರು

ದಾವಣಗೆರೆ: ರೈತರಿಂದ ಮೆಕ್ಕೆಜೋಳ ಖರೀದಿಸಿ 10 ಕೋಟಿ 63 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹರಿಹರದ ಪಯನಿಯರ್ ಪ್ರವೇಟ್ ಲಿಮಿಟೆಡ್ ನ ಪಾಲುದಾರನಾಗಿದ್ದ ನಂದಕುಮಾರ್ ಬಂಧಿತ ಆರೋಪಿ 10 ಕೋಟಿ 63 ಲಕ್ಷ‌ ಮೊತ್ತದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ. ತಮಿಳುನಾಡಿನಲ್ಲಿ ಬಂಧಿಸಿರುವ ದಾವಣಗೆರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಂದಕುಮಾರ್ 2008 ರಲ್ಲಿ ಹರಿಹರದ ದೋಸ್ತಾನ ಟ್ರೇಡರ್ಸ್ ಮಾಲೀಕ ಖಲೀಲ್ ದೋಸ್ತಾನ ಬಳಿ 1 ಕೋಟಿ ರೂಪಾಯಿ ಮೌಲ್ಯದ ಮೆಕ್ಕೆಜೋಳ ಖರೀದಿ ಮಾಡಿದ್ದ. ಮೆಕ್ಕೆಜೋಳ ಖರೀದಿಸಿ ವ್ಯಾಪಾರಿ ಖಲೀಲ್ ಗೆ 1 ಕೋಟಿ ರೂಪಾಯಿಯ ಚೆಕ್ ಅನ್ನು ನಂದಕುಮಾರ್ ನೀಡಿದ್ದ. ಈ ಚೆಕ್ ಬೌನ್ಸ್ ಆದ ಕಾರಣ ನಂದಕುಮಾರ್ ವಿರುದ್ಧ ಹರಿಹರ ಜೆಎಂಎಫ್ ಸಿ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು.

ಈ ವೇಳೆ ಹರಿಹರದ ಜೆಎಂಎಫ್ ಸಿ ನ್ಯಾಯಾಲಯ ನಂದಕುಮಾರ್ ಗೆ 33 ಬಾರಿ ಬಂಧನದ ವಾರೆಂಟ್ ಜಾರಿ ಮಾಡಿತ್ತು. ಆದರೂ ಕ್ಯಾರೇ ಎಂದಿರಲಿಲ್ಲ.

ವಾರೆಂಟ್ ಜಾರಿ ಮಾಡಿದ್ರು ಕೋರ್ಟ್ ಗೆ ಹಾಜರಾಗದ ಕಾರಣ ಅರೆಸ್ಟ್ ವಾರೆಂಟ್ ಅನ್ನು ನ್ಯಾಯಾಲಯ ಜಾರಿ ಮಾಡಿತ್ತು. ಈ ವೇಳೆ ತಮಿಳುನಾಡಿನ ತಿರುಪುರದಿಂದ ನಂದಕುಮಾರ್ ನನ್ನ ಬಂಧಿಸಿ ಕರೆತರಲಾಗಿದೆ.

ಜಿಲ್ಲೆಯ ಸುತ್ತಮುತ್ತಲಿನ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಿ ನಂದಕುಮಾರ್ ಮಾರಾಟ ಮಾಡುತ್ತಿದ್ದ. ದಾವಣಗೆರೆ, ಹರಿಹರ, ಹೊನ್ನಾಳಿ, ಶಿವಮೊಗ್ಗ, ರಾಣೆಬೆನ್ನೂರು, ಹಾವೇರಿಯಲ್ಲಿ ಮೆಕ್ಕೆಜೋಳ ಖರೀದಿಸಿ ಅನೇಕ ವ್ಯಾಪಾರಿಗಳಿಗೆ ಚೆಕ್ ನೀಡಿದ್ದ. ವಿವಿಧ ವ್ಯಾಪಾರಿಗಳಿಂದಲುಇ ಮೆಕ್ಕೆಜೋಳ ಖರೀದಿ ಮಾಡಿ 10 ಕೋಟಿ 63 ಲಕ್ಷ ಚೆಕ್ ನೀಡಿದ್ದ. ಈ ಎಲ್ಲ ಚೆಕ್ ಗಳು ಬೌನ್ಸ್ ಆದ ಹಿನ್ನಲೆ ಈತನ ಮೇಲೆ ಹರಿಹರ ಪ್ಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೋರ್ಟ್ ಆದೇಶದಂತೆ ನಂದಕುಮಾರನನ್ನ ಬಂಧಿಸಿರುವ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ತಿಂಗಳು 22 ರಂದು ಆರೋಪಿ ನಂದಕುಮಾರ್ ನನ್ನು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button