Breaking Newsಕ್ರಿಕೆಟ್ಕ್ರೀಡೆ
Inzamam Ul Haq: ಇಂಜಮಾಮ್ಗೆ ಹೃದಯಾಘಾತ: ಚಿಕಿತ್ಸೆಯ ಬಳಿಕ ಚೇತರಿಕೆ

ಲಾಹೋರ್ : ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ -ಉಲ್- ಹಕ್ ಅವರು ಸೋಮವಾರ ರಾರ್ತಿ ಹೃದಯಾಘಾತಕ್ಕೊಳಗಾಗಿದ್ದು ಅವರಿಗೆ ಕೂಡಲೇ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೊರಡಿಸಿರುವ ಮಾಹಿತಿ ಪ್ರಕಾರ 51 ವರ್ಷ ಪ್ರಾಯದ ಇಂಜಿ, ಅವರಲ್ಲಿ ಕಳೆದ ಮೂರು ದಿನಗಳ ಹಿಂದೆಯೇ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಆದರೆ ಪರೀಕ್ಷೆ ಮಾಡಿಸಿದಾಗ ಹೃದಯಾಘಾತ ಸಂಭವಿಸುವ ಯಾವುದೇ ಲಕ್ಷಣ ಕಂಡುಬರಲಿಲ್ಲ.
1992ರ ವಿಶ್ವಕಪ್ ಹೀರೋ ಇಂಜಮಾಮ್ 375 ಏಕದಿನ ಪಂದ್ಯಗಳನ್ನಾಡಿ 11,701 ರನ್ ಗಳಿಸಿದ್ದರು. 119 ಟೆಸ್ಟ್ ಪಂದ್ಯಗಳನ್ನಾಡಿ 8829 ರನ್ ಗಳಿಸಿ, ನಿವೃತ್ತಿಯ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಅಧ್ಯಕ್ಷ ಮತ್ತು ಅಫಘಾನಿಸ್ತಾನದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ಇಂಜಿಯು ಬೇಗನೇ ಚೇತರಿಸಿಕೊಳ್ಳಲಿ ಎಂದು ಕ್ರಿಕೆಟ್ ಜಗತ್ತಿನ ಪ್ರಮುಖರು ಇಂಜಿಗೆ ಶುಭ ಹಾರೈಸಿದ್ದಾರೆ.
