Breaking NewsLatestರಾಷ್ಟ್ರೀಯಸುದ್ದಿ

ಮಾಜಿ ಮಂತ್ರಿ ಬಿಎಸ್ ಪಿ ಪಕ್ಷದ ರಾಮ್ ವೀರ್ ಉಪಾಧ್ಯಾಯ ಬಿಜೆಪಿಗೆ ಸೇರ್ಪಡೆ

ಲಖ್ನೋ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಪಕ್ಷಾಂತರ ಪರ್ವ ಬಿಡುವಿಲ್ಲದೆ ನಿರಂತರವಾಗಿ ಸಾಗಿದೆ. ಒಂದು ಕಡೆ ಹಲವು ಶಾಸಕರು ಮತ್ತು ಸಚಿವರು ಬಿಜೆಪಿ ತೊರೆಯುತ್ತಿದ್ದರೆ ಮತ್ತೊಂದು ಕಡೆ ಕೆಲವು ಶಾಸಕರು ಬಿಜೆಪಿ ಸೇರುತ್ತಿದ್ದಾರೆ. ಬಿಎಸ್ಪಿ ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕ ರಾಮ್ ವೀರ್ ಉಪಾಧ್ಯಾಯ ಬಿಎಸ್ಪಿಗೆ ಗುಡ್ ಬೈ ಹೇಳಿ ಕಮಲ ಪಕ್ಷ ಸೇರಿಕೊಂಡಿದ್ದಾರೆ.
ಮಾಯಾವತಿಯವರು ಕಾನ್ಸಿರಾಮ್ ಅವರ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ಪಕ್ಷವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಎಸ್ಪಿ ಶಾಸಕರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿದ 24ಗಂಟೆಗಳ ಬಳಿಕ ಈ ಘಟನೆ ಜರುಗಿದೆ. ಉಪಾಧ್ಯಾಯ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ನಾಯಕಿ ಮಾಯಾವತಿ ಅವರಿಗೆ ಕಳಿಸಿ, ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಅವರ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಪಕ್ಷ ಸಾಗುತ್ತಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button