Breaking NewsLatestರಾಜಕೀಯರಾಷ್ಟ್ರೀಯಸುದ್ದಿ

ಪಂಚರಾಜ್ಯಗಳ ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಈ ಪೈಕಿ ಮೊದಲ ಎರಡು ಹಂತದ ಚುನಾವಣೆಗೆ ರಾಜಕೀಯ ಪಕ್ಷಗಳ ಪ್ರಚಾರ ತಾರಕಕ್ಕೇರಿದೆ. ಇದರ ಜತೆಗೆ ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯ ಚುರುಕುಗೊಂಡಿದೆ. ಮೊದಲ ಎರಡು ಹಂತದ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ನಂತರ ಸ್ಟಾರ್ ಪ್ರಚಾರಕರು ಮತ್ತು ವಿವಿಧ ರಾಜಕೀಯ  ಪಕ್ಷಗಳ ಪ್ರಮುಖ ನಾಯಕರು; ಸಾರ್ವಜನಿಕ ರ್ಯಾಲಿಗಳಲ್ಲಿ ತೊಡಗಿದ್ದರು.

ಪಂಜಾಬ್, ಮಣಿಪುರ ಮತ್ತು ಗೋವಾಗಳಲ್ಲೂ ಚುನಾಣೆ ನಡೆಯಲಿದ್ದು ರಾಜಕೀಯ ಚಟುವಟಿಕೆ ಮತ್ತು ಪ್ರಚಾರ ಕಾರ್ಯ ಗರಿಗೆದರಿದೆ. ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡುವುದೂ ಸೇರಿದಂತೆ ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ರಾಜಕೀಯ ನಾಯಕರು ಸರಣಿ ಸಭೆಗಳನ್ನು ನಡೆಸಿ ಗೆಲ್ಲುವ ಕುದುರೆಗಳ ಲೆಕ್ಕಾಚಾರದಲ್ಲಿ ತೊಡಗಿವೆ.

ಈ ನಡುವೆ, ಉತ್ತರ ಪ್ರದೇಶದಲ್ಲಿ 3ನೇ ಹಂತದ ಮತ್ತು ಪಂಜಾಬ್ ನಲ್ಲಿ ಮೊದಲ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮಂಗಳವಾರ ಸಂಜೆ ಪೂರ್ಣಗೊಂಡಿದೆ. ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತ ಚುನಾವಣೆಗೆ ನಾಮಪತ್ರ ಸಲ್ಲಿಕೆ ಗುರುವಾರದವರೆಗೂ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ 7 ಹಂತದ ವಿಧಾನಸಭೆ ಚುನಾವಣೆಯ 5ನೇ ಮತ್ತು ಮಣಿಪುರದಲ್ಲಿ ಮೊದಲ ಎರಡು ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮಂಗಳವಾರ ಅಧಿಸೂಚನೆ ಹೊರಡಿಸುವುದರೊಂದಿಗೆ ಆರಂಭವಾಗಿದೆ. ಆದರೆ, ಮೊದಲ ದಿನ ಎರಡೂ ರಾಜ್ಯಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಉತ್ತರಪ್ರದೇಶದಲ್ಲಿ 5 ನೇ ಹಂತದ ಮತದಾನವು ಫೆ.27ರಂದು ಪ.ಜಾತಿ ಮತ್ತು ಪಂಗಡಗಳ 9 ಮೀಸಲು ಕ್ಷೇತ್ರಗಳೂ ಸೇರಿದಂತೆ ಅಯೋಧ್ಯೆ, ಅಮೇಥಿ, ರಾಯ್ ಬರೇಲಿ, ಪ್ರಯಾಗ್ ರಾಜ್ ಸೇರಿದಂತೆ 12 ಜಿಲ್ಲೆಗಳ 61 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button