Breaking NewsLatestರಾಷ್ಟ್ರೀಯಸುದ್ದಿ

ಮಹಿಳೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವು

ಗುಜರಾತ್ : ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಒಂದೇ ಕುಟುಂಬದ ಐವರು ಕಚ್‌ನ ನರ್ಮದಾ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘೋರ ದುರಂತ ನಡೆದಿದೆ.

ಮಹಿಳೆ ನೀರು ತರಲುಹೋದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ.

ಈ ವೇಳೆ ಆಕೆಯನ್ನು ರಕ್ಷಿಸಲು ಒಂದೇ ಕುಟುಂಬದ ಐವರು ನೀರಿಗೆ ಇಳಿದಿದ್ದಾರೆ. ಆದ್ರೆ, ದುರಾದೃಷ್ಟವೆಂಬಂತೆ, ನೀರಿಗೆ ಇಳಿದ ಎಲ್ಲರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಅಗಮಿಸಿದ ಪೊಲೀಸರು ಎಲ್ಲಾ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button