Breaking Newsಕ್ರಿಕೆಟ್ಕ್ರೀಡೆ

Prasidh Krishna: ನಾಲ್ಕನೇ ಟೆಸ್ಟ್‌: ಕರ್ನಾಟಕದ ಪ್ರಸಿಧ್ ಕೃಷ್ಣಗೆ ಅವಕಾಶ

ಲಂಡನ್ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ಗೆ ತಂಡವನ್ನು ಪ್ರಕಟಿಸಿದ್ದು, ಕರ್ನಾಟಕದ ವೇಗದ ಬೌಲರ್ ಪ್ರಸಿಧ್ ಕೃಷ್ಣ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ಗುರುವಾರದಿಂದ ಓವಲ್ ನಲ್ಲಿ ನಾಲ್ಕನೇ ಟೆಸ್ಟ್ ಆರಂಭಗೊಳ್ಳಲಿದೆ. ಭಾರತ ತಂಡದ ವಿನಂತಿ ಮೇರೆಗೆ ಪ್ರಸಿಧ್ ಅವರನ್ನು ಕಾಯ್ದಿರಿಸಿದ ಆಟಗಾರರನ್ನಾಗಿ ತಂಡಕ್ಕೆ ಸೇರಿಸಲಾಗಿದೆ.

“ತಂಡದ ಮ್ಯಾನೇಜ್ಮೆಂಟ್ ವಿನಂತಿ ಮೇರೆಗೆ ಪ್ರಸಿಧ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ನಾಲ್ಕನೇ ಟೆಸ್ಟ್ ನಲ್ಲಿ ಅವರು ರಿಸರ್ವ್ ಆಟಗಾರರಾಗಿ ತಂಡವನ್ನು ಸೇರಲಿದ್ದಾರೆ” ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಶಾರ್ಧೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ತಂಡದಲ್ಲಿರುವಾಗಲೇ ಪ್ರಸಿಧ್ ಅವರನ್ನು ಆಯ್ಕೆ ಮಾಡಿರುವುದನ್ನು ಗಮನಿಸಿದರೆ ಅವರು ನಾಳೆ ತಂಡದಲ್ಲಿ ಆಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Spread the love

Related Articles

Leave a Reply

Your email address will not be published. Required fields are marked *

Back to top button