Breaking NewsLatestಕೃಷಿರಾಷ್ಟ್ರೀಯ

ಸಂಸತ್ ಒಳಗೆ ಅಧಿವೇಶನ, ಹೊರಗೆ ಹೋರಾಟ; ರೈತರ ಶಾಂತಿಯುತ ಪ್ರತಿಭಟನೆ

ವರದಿ: ಎಂ ಹೈದರ್

ನವದೆಹಲಿ: ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ವರ್ಷದ ನವೆಂಬರ್ 26 ರಿಂದ ದೆಹಲಿಯ ಸಿಂಗು, ಗಾಜೀಪುರ ಮತ್ತು ಟಿಕ್ರಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಚಳವಳಿ ಇಂದಿಗೆ 239ನೇ ದಿನಕ್ಕೆ ಕಾಲಿಟ್ಟಿದೆ.

ಚಳವಳಿಯನ್ನು ತೀವ್ರಗೊಳಿಸುವ ಭಾಗವಾಗಿ ಸಂಯುಕ್ತ ಕಿಸಾನ್ ಮೋರ್ಚ ಈಗ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಸತ್ತಿಗೆ ಹತ್ತಿರವಿರುವ ದೆಹಲಿಯ ಜಂತರ್ ಮಂತರ್ ನಲ್ಲಿ 200 ಜನ ರೈತರು ಸಿಂಗು ಗಡಿಯಿಂದ ಬಸ್ ಗಳ ಮೂಲಕ ಬಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಪ್ರತಿಭಟನೆಯು ಇಂದಿನಿಂದ ಪ್ರತಿದಿನ ಸರಣಿಯಂತೆ 200 ಜನ ರೈತರನ್ನೊಳಗೊಂಡು ಬೆಳಗ್ಗೆ 11ರಿಂದ ಸಂಜೆ 5ವರೆಗೆ ಜಂತರ್ ಮಂತರ್ ನಲ್ಲಿ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ಹೇಳಿದೆ.

ಸರ್ಕಾರ ರೈತರ ಮಾತನ್ನು ಕೇಳುತ್ತಿಲ್ಲ. ಅದ್ದರಿಂದ ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ರೈತರು ಜಂತರ್ ಮಂತರ್ ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಸತ್ತು ನಡೆಸಲಿದೆ, ಎಂದು ರೈತ ಮುಖಂಡರು ಈಗಾಗಲೇ ಹೇಳಿದ್ದಾರೆ. ಮತ್ತು ವಿರೋಧ ಪಕ್ಷಗಳು ಇದನ್ನು ಸಂಸತ್ತಿನ ಒಳಗೆ ಪ್ರಸ್ತಾಪಿಸಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಒತ್ತಡ ಹೇರಬೇಕೆಂದು ಕರೆ ನೀಡಿದ್ದಾರೆ.

ಮೂರು ಕೃಷಿ ತಿದ್ದುಪಡಿ ಕಾನೂನುಗಳು ಕಾರ್ಪೊರೇಟ್ ಗಳ ಹಿತಕ್ಕಾಗಿ ತರಲಾಗಿದೆ ಇದರಿಂದ ರೈತರು ಬೀದಿಗೆ ಬರಲಿದ್ದಾರೆ ರೈತರು ಬೆಂಬಲ ಬೆಲೆಯಿಂದ ವಂಚಿತರಾಗಲಿದ್ದಾರೆ, ಕಾರ್ಪೋರೇಟ್ ಗಳು ಉತ್ಪನ್ನಗಳನ್ನು ದಾಸ್ತಾನು ಮಾಡಿ ಕೃತಕ ಅಭಾವವನ್ನು ಸೃಷ್ಟಿಸಿ ವಹಿವಾಟು ನಡೆಸಲು ಇದು ದಾರಿಯಾಗಲಿದೆ, ದೇಶದ ರೈತರು, ಕೂಲಿಕಾರ್ಮಿರು, ಬಡವರು, ಮಧ್ಯಮ ವರ್ಗಗಳ ಮೇಲೆ ಇದರಿಂದ ಗಂಭೀರ ಪರಿಣಾಮ ಉಂಟಾಗಲಿದೆ, ಅಲ್ಲದೇ ದೇಶದಲ್ಲಿರುವ 50 ರಷ್ಟಿರುವ ಕೃಷಿವಲಯವನ್ನು ಕಾರ್ಪೊರೇಟ್ ಗಳು ಸಂಪೂರ್ಣ ಹತೋಟಿಗೆ ತಂದರೆ ಅವರುಗಳು ಆಧುನಿಕ ಯಂತ್ರಗಳನ್ನು ಬಳಸಿ ದೇಶದಲ್ಲಿ ಮತ್ತಷ್ಟು ಭೀಕರವಾದ ನಿರುದ್ಯೋಗ ಸಮಸ್ಯೆಗೆ ಇದು ಕಾರಣವಾಗಲಿದೆ ಎಂಬ ಆತಂಕವನ್ನು ಕೂಡ ರೈತ ನಾಯಕರು ವ್ಯಕ್ತಪಡಿಸಿದ್ದಾರೆ.

ಕಳೆದ ಅಕ್ಟೋಬರ್ 13 ರಂದು ಸರ್ಕಾರ ಮತ್ತು ರೈತರ ನಡುವೆ ನಡೆದ ಮೊದಲ ಮಾತುಕತೆಯಿಂದ ಪ್ರಾರಂಭವಾಗಿ ಇದುವರೆಗೂ 11 ಬಾರಿ ಮಾತುಕತೆ ನಡೆದರು ಯಾವುದೇ ರೀತಿಯ ಫಲಪ್ರದ ಕಾಣದೆ ಮಾತುಕತೆ ಮುರಿದು ಬಿದ್ದಿದೆ ಅಂತೆಯೇ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಸರ್ಕಾರದ ಎಲ್ಲ ಪ್ರಯತ್ನ ಗಳು ವಿಫಲವಾಗಿ ಪ್ರತಿಭಟನೆ ಮುಂದುವರೆದಿದೆ.

ಈ ನಡುವೆ ಜನವರಿ 26 ರಂದು ಕೆಂಪುಕೋಟೆಯಲ್ಲಿ ರೈತರು ದ್ವಜ ಹಾರಿಸಿದ ಘಟನೆಯಲ್ಲಿ ಪಾಲ್ಗೊಂಡ ಪ್ರಮುಖ ಆರೋಪಿ ದೀಪ್ ಸಿದು ಬಿಜೆಪಿ ನಾಯಕರೊಡನೆ ನಿಕಟ ಸಂಪರ್ಕ ಹೊಂದಿದ್ದರಿಂದ ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಭುತ್ವದ ತಂತ್ರ ವಿಫಲವಾಗಿ ಅನ್ನದಾತರ ಪ್ರತಿಭಟನೆಯು ಎಲ್ಲ ಅಡೆತಡೆಗಳನ್ನು ಮೀರಿ ಮುಂದುವರೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button