Breaking NewsLatestವಿದೇಶ
ಅಫ್ಘಾನಿಸ್ತಾನದಲ್ಲಿ ಭೂಕಂಪ : ಮೃತರ ಸಂಖ್ಯೆ 26 ಕ್ಕೆ ಏರಿಕೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪ ದುರಂತದಲ್ಲಿ ಮೃತರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ. ಅನೇಕರು ಮನೆ- ಮಠ ಕಳೆದುಕೊಂಡಿದ್ದಾರೆ. ಸಾವಿರಾರು ಮನೆಗಳು ಜಖಂ ಗೊಂಡಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಅಧಿಕಾರಿ ಮೂಲಗಳು ಹೇಳಿವೆ.
ಜೊತೆಗೆ ಈ ವಲಯದಲ್ಲಿ ಮೇಲಿಂದ ಮೇಲೆ ಅನೇಕ ಕಂಪನಗಳು ಉಂಟಾಗುತ್ತಿರುವುದು ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಭೂಕಂಪನದ ಕೇಂದ್ರಬಿಂದು ಪಶ್ಚಿಮ ಅಫ್ಘಾನಿಸ್ತಾನದ ಬಡ್ಗಿಸ್ ಪ್ರಾಂತ್ಯದ ರಾಜಧಾನಿ ಕ್ವಾಲಾ-ಇ-ನಾವ್ ಜಿಲ್ಲೆಯ ಪೂರ್ವದಲ್ಲಿತ್ತು ಎಂದು ಹೇಳಲಾಗಿದೆ.
ಭೂಕಂಪದಿಂದ ಹಲವು ಮನೆಗಳು ಜಖಂ ಗೊಂಡಿವೆ ಎಂದು ಖಾದಿಸ್ ಜಿಲ್ಲಾ ಗವರ್ನರ್ ಮೊಹಮ್ಮದ್ ಸಾಲಿಹ್ ಪರ್ದಿಲ್ ಹೇಳಿದ್ದಾರೆ. ಹೆರಾತ್ ಮತ್ತು ಫರಾದಲ್ಲಿಯೂ ಭೂಕಂಪನದ ಅನುಭವಗಳ ವರದಿಯಾಗಿದೆ.
