Breaking NewsLatestಜಿಲ್ಲಾ ಸುದ್ದಿದಕ್ಷಿಣ ಕನ್ನಡ

ಭಾರೀ ಮಳೆ : ಮುಂಬೈ – ಮಂಗಳೂರು ರೈಲು ಸ್ಥಗಿತ

ಮಂಗಳೂರು: ಮುಂಬೈ-ಮಂಗಳೂರು ಕಡೆಗೆ ಸಂಪರ್ಕಿಸುವ ಕೊಂಕಣ ಮಾರ್ಗದಲ್ಲಿ ಬಹುತೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರದೆಲ್ಲಡೆ ಮಳೆ ಅಬ್ಬರ ಜೋರಾಗಿದೆ. ಕಮತೆ ರೈಲು ನಿಲ್ದಾಣದ ಸಮೀಪ ವಶೀಷ್ಟಿ ನದಿ ಅಪಾಯದ ಪ್ರಮಾಣದಲ್ಲಿ ಹರಿಯುತ್ತಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ವಿಶೇಷ ರೈಲು, ಮಂಗಳೂರು ಜಂಕ್ಷನ್-ಮುಂಬೈ ಸಿಎಸ್ಎಂಟಿ ವಿಶೇಷ ರೈಲು, ತಿರುವನಂತಪುರ ಸೆಂಟ್ರಲ್- ನೇತ್ರಾವತಿ ರೈಲು ಸಂಚಾರ ರದ್ದುಗೊಂಡಿದೆ.

ಕೇರಳ-ತಮಿಳುನಾಡು ಮಾರ್ಗದಲ್ಲಿ ಉತ್ತರ ಭಾರತದ ವಿವಿಧ ಭಾಗಗಳಿಗೆ ಸಂಚರಿಸುವ ರೈಲುಗಳನ್ನುಅರ್ಧದಾರಿಯಲ್ಲೇ ಬದಲಿ ಮಾರ್ಗವಾಗಿ ಕಳುಹಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ

Spread the love

Related Articles

Leave a Reply

Your email address will not be published. Required fields are marked *

Back to top button