Breaking NewsLatestಮೆಟ್ರೋರಾಜ್ಯ

ಡ್ರಗ್ಸ್ ಜಾಲ: ಬೆಂಗಳೂರಿನಲ್ಲಿ ಪೊಲೀಸರ ರೇಡ್; ಉದ್ಯಮಿ ಭರತ್ ವಶಕ್ಕೆ

ಬೆಂಗಳೂರು: ಚಿತ್ರರಂಗ ಮತ್ತು ಡ್ರಗ್ಸ್ ದಂಧೆಯ ಜಾಲದ ನಡುವಿನ ನಂಟು ಮತ್ತೆ ಬಯಲಾಗುತ್ತಿದೆ. ಸೋಮವಾರ ಬೆಳಗ್ಗೆಯೇ ಉದ್ಯಮಿ ಭರತ್, ನಟಿ ಸೋನಿಯಾ ಅಗರ್ವಾಲ್, ಡಿಜೆ ವಚನ್ ಚಿನ್ನಪ್ಪ ಮೊದಲಾದವರ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಉದ್ಯಮಿ ಭರತ್​ನನ್ನು ವಶಕ್ಕೆ ಪಡೆಯಲಾಗಿದೆ.

ಗೋವಿಂದಪುರ ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿ, ಡ್ರಗ್ ಪೆಟ್ಲರ್ ಥಅಮಸ್ ಈ ಹಿಂದೆ ನೀಡಿದ್ದ ಮಾಹಿತಿ ಆಧರಿಸಿ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆ ಇದಾಗಿದೆ.

ಬೆನ್ಸೆನ್ ಟೌನ್, ಪದ್ಮನಾಭನಗರ, ರಾಜಾಜಿನಗರ ಮೊದಲಾದೆಡೆ ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು. ಮಾದಕ ವಸ್ತು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ತಮ್ಮ ಫ್ಲಾಟ್​ನಲ್ಲಿಯೇ ಪಾರ್ಟಿ ನಡೆಸುತ್ತಿದ್ದ ಭರತ್, ಸೆಲೆಬ್ರಿಟಿಗಳ ಜೊತೆಗೂ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button