Breaking NewsLatestಬಾಲಿವುಡ್ಮನರಂಜನೆಸಿನಿಮಾ
ಶಾರೂಖ್ ಖಾನ್ ಮಗನ ಡ್ರಗ್ಸ್ ಪ್ರಕರಣ: ಸಾಕ್ಷಿ ಪ್ರಭಾಕರ್ ಹೃದಯಾಘಾತದಿಂದ ಸಾವು

ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಪೃತಪಟ್ಟಿದ್ದಾನೆ.
ಚೆಂಬೂರಿನ ಮಹುಲ್ ನಿವಾಸದಲ್ಲಿ ಪ್ರಭಾಕರ್ ಸೈಲ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವಕೀಲ ತುಷಾರ್ ಖಂಡಾರೆ ತಿಳಿಸಿದ್ದಾರೆ. ಪ್ರಭಾಕರ್ ಸೈಲ್ ಅವರ ಮೃತದೇಹವನ್ನು ಇಂದು ಅಂದೇರಿಯಲ್ಲಿರುವ ನಿವಾಸದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
