Breaking NewsLatestಚಾಮರಾಜನಗರಜಿಲ್ಲಾ ಸುದ್ದಿಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಅಪ್ಪು ಆಸೆಯಂತೆಯೇ ಡಾ.ರಾಜ್​ ಹುಟ್ಟಿದ ಮನೆಯ ಕಾಯಕಲ್ಪ

ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಆಸೆಯಂತೆಯೇ ಗಾಜನೂರಿನಲ್ಲಿರುವ ವರನಟ ಡಾ.ರಾಜ್​ಕುಮಾರ್​ ಜನಿಸಿದ ಮನೆಯನ್ನ ರಿನೋವೇಷನ್ ಮಾಡಲಾಗಿದೆ.

ಸುಮಾರು ನೂರೈವತ್ತು ವರ್ಷಗಳಷ್ಟು ಹಳೆಯದಾದ ಮನೆ ಸಾಕಷ್ಟು ಶಿಥಿಲಗೊಂಡಿತ್ತು. ಸದ್ಯ ಮನೆಯನ್ನ ಪುನೀತ್ ರಾಜ್​ಕುಮಾರ್ ಆಸೆಯಂತೆ ದುರಸ್ತಿ ಕಾರ್ಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮನೆಯಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್ ಹಾಗೂ ಕುಟುಂಬದವರು ಪೂಜೆ ಸಲ್ಲಿಸಿದರು.

ಡಾ.ರಾಜ್​ಕುಮಾರ್ ಹುಟ್ಟಿದ ಗಾಜನೂರಿನ ಮನೆ

ಈ ಬಗ್ಗೆ ಮಾತನಾಡಿದ ಡಾ.ರಾಜ್​ ಸಹೋದರಿ ನಾಗಮ್ಮ ಪುತ್ರ ಗೋಪಾಲ್, ಇದು ಕನ್ನಡಿಗರ ಆಸ್ತಿ. ಡಾ.ರಾಜ್​ ಹುಟ್ಟಿದ ಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿ ಸಂರಕ್ಷಣೆ ಮಾಡುವುದ ನಮ್ಮ ಕರ್ತವ್ಯ. ಅದು ಕೇವಲ ನಮ್ಮದಲ್ಲ. ಸಾರ್ವಜನಿಕರ ಆಸ್ತಿ. ಸತತ ಮಳೆಯಿಂದ ಮನೆ ಕುಸಿಯುವ ಹಂತಕ್ಕೆ ಬಂದಿತ್ತು. ಮನೆಯಲ್ಲಿದ್ದ ವಸ್ತುಗಳನ್ನೇ ಉಪಯೋಗಿಸಿಕೊಂಡು ದುರಸ್ತಿ ಮಾಡಿದ್ದೇವೆ. ಒಂದೂವರೆ ತಿಂಗಳ ಕಾಲ ಕೆಲಸ ಮಾಡಿ ಮನೆ ದುರಸ್ತಿ ಕಾರ್ಯ ಮಾಡಿಸಿದ್ದೇವೆ. ದುರಸ್ತಿ ನಂತರ ಪೂಜೆ ಮಾಡಿರಲಿಲ್ಲ. ನಮ್ಮ ಮಾವನವರ ಮಕ್ಕಳು ಬರಲಿ ಎಂದು ಕಾದಿದ್ದೆವು. ಇಂದು ರಾಘಣ್ಣ ಬಂದಿದ್ದು ಅವರ ಕೈಯಲ್ಲಿ ಪೂಜೆ ಮಾಡಿಸಿದ್ದೇವೆ ಎಂದು ಹೇಳಿದ್ದಾರೆ.

ಪೂಜೆಯ ಹಿನ್ನೆಲೆ ಪತ್ನಿ ಮಂಗಳ ಜೊತೆ ದೊಡ್ಡ ಗಾಜನೂರಿಗೆ ಭೇಟಿ ನೀಡಿದ ರಾಘವೇಂದ್ರ ರಾಜ್​ಕುಮಾರ್ ಬಳಿಕ ಸೋದರತ್ತೆ ನಾಗಮ್ಮ ಅವರ ಯೋಗ ಕ್ಷೇಮ ವಿಚಾರಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button