Breaking NewsLatestಚರ್ಚೆಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರರಾಜ್ಯಸುದ್ದಿ

ಸರ್ವಿಸ್ ರಸ್ತೆ ಬೇಕಿಲ್ಲ, ಅಂಡರ್ ಪಾಸ್ ಮಾಡ್ಲಿಲ್ಲ ಅಂದ್ರೆ ಬಿಡಲ್ಲ: ಹೋರಾಟದ ಎಚ್ಚರಿಕೆ

ದೇವನಹಳ್ಳಿ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 207 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ವಿಶ್ವನಾಥಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ  ಹೊಂದಿಕೊಂಡಿರುವ ಆಸ್ಪತ್ರೆಯ ರಸ್ತೆಯ ಹತ್ತಿರದಲ್ಲಿ  ಸ್ಕೈವಾಕ್ ಅಗತ್ಯವಿಲ್ಲ. ಇದರಿಂದ ಸೈಕಲ್ ಮೂಲಕ ಶಾಲೆಗೆ ಬರುವ ಇಲ್ಲಿನ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವಂತೆ  ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಕಾಮಗಾರಿ ಈಗಾಗಲೇ ಹೆದ್ದಾರಿ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ವಿಶ್ವನಾಥಪುರ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಜನರು, ರೋಗಿಗಳು ಬಂದು ಹೋಗುತ್ತಿರುತ್ತಾರೆ. ಅವೈಜ್ಞಾನಿಕ ಸರ್ವಿಸ್ ರಸ್ತೆ ನಿರ್ಮಾಣ ಮಾಡಿದ್ದು, ಅದು ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು 2 – 3 ಕಿಮೀ ದೂರದಿಂದ ಬರಬೇಕಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬರಬೇಕಾದರೆ ಇದರಿಂದ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಕೂಡಲೇ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಾಹೆಯಲ್ಲಿ ಅಂಡರ್ ಪಾಸ್ ಮಾಡಿದರೆ ಸಾಕಷ್ಟು ಅನುಕೂಲ ವಾಗುತ್ತದೆ. ಹೆದ್ದಾರಿಗೆ ಹೊಂದಿಕೊಂಡಿರುವ ಆಸ್ಪತ್ರೆಯ ರಸ್ತೆಗೆ ಸರ್ವಿಸ್ ರಸ್ತೆಯ ಅವಶ್ಯಕತೆ ಇರಲಿಲ್ಲ. ಸರ್ವಿಸ್ ರಸ್ತೆ ಬದಲಿಗೆ ಅಂಡರ್ ಪಾಸ್ ಮಾಡಬೇಕು  ಎಂದು ಹಲವು ಬಾರಿ ಮನವಿ ಮಾಡಿದ್ದೇವೆ ಜನಪ್ರತಿ ನಿಧಿಗಳ ಗಮನಕ್ಕೂ ತದಿದ್ದೇವೆ ಆದರೂ ಯಾರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಏನಾದರೂ ಅಂಡರ್ ಪಾಸ್ ಆಗದೇ ಹೋದರೆ ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button