Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ಅಮೂಲ್ಯ ಮಕ್ಕಳ ಹೆಸರೇನು ಗೊತ್ತಾ..?

ನಟಿ ಅಮೂಲ್ಯ ಸಿನಿಮಾಗಳಲ್ಲಿ ಸಾಲು ಸಾಲು ಆಫರ್ ಗಳಿದ್ದಾಗಲೇ ಮದುವೆ ಜೀವನಕ್ಕೆ ಕಾಲಿಟ್ಟವರು. ಮದುವೆಯಾದ ಬಳಿಕ ಸಿನಿಮಾ ಜೀವನದಿಂದ ದೂರವೇ ಉಳಿದು ಬಿಟ್ಟಿದ್ದರು.

ಈಗ ಮಕ್ಕಳು, ಹಾರೈಕೆ ಅಂತ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳು ಈಗಲೂ ಅಮೂಲ್ಯ ಕಮ್ ಬ್ಯಾಕ್ ಆಗಲಿ ಎಂದೇ ಬಯಸುತ್ತಿದ್ದಾರೆ.

ಗಂಡ, ಮನೆ, ಮಕ್ಕಳು ಎನ್ನುವಾಗಲೂ ಫ್ಯಾನ್ಸ್ ಗಳಿಂದ ದೂರ ಉಳಿದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಜೀವನದ ಆಗುಹೋಗುಗಳು, ಅಪೆಷಲ್ ಮೂಮೆಂಟ್ಸ್ ನೆಲ್ಲಾ ಶೇರ್ ಮಾಡುತ್ತಾ ಇರುತ್ತಾರೆ. ಇಂದು ಕೂಡ ಅಂತದ್ದೊಂದು ಸ್ಪೆಷಲ್ ಎನಿಸುವಂತ ವಿಚಾರವನ್ನು ಹಂಚಿಕೊಂಡಿದ್ದಾರೆ.

ಅಮೂಲ್ಯ ಅವಳಿ ಮಕ್ಕಳಿಗೆ ತಾಯಿ ಆಗಿರುವ ವಿಚಾರ ಎಲ್ಲರಿಗೂ ಗೊತ್ತು. ಹಾಗೇ ಮಕ್ಕಳು ಹೇಗಿದ್ದಾರೆ ಎಂಬ ವಿಚಾರವನ್ನು ಅಮೂಲ್ಯ ಫೋಟೋಗಳನ್ನು ತೋರಿಸಿದ್ದಾರೆ. ಆದ್ರೆ ಸ್ಟಾರ್ ಗಳ ಮಕ್ಕಳಿಗೆ ಹೆಸರಿಡುವಾಗ ಅಭಿಮಾನಿಗಳಿಗೂ ಕುತೂಹಲವಿರುತ್ತದೆ. ಮಕ್ಕಳಿಗೆ ಯಾವ ಅರ್ಥ ಬರುವಂತ ಹೆಸರಿಡಬಹುದು ಎಂದು ಕಾಯುತ್ತಲೇ ಇರುತ್ತಾರೆ. ಇದೀಗ ಅಮೂಲ್ಯ ಬಗೆಗಿದ್ದ ಕೌತುಕವೂ ಕಡಿಮೆಯಾಗಿದೆ.

ಇಂದು ಅಮೂಲ್ಯ ಮತ್ತು ಜಗದೀಶ್ ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಇಬ್ಬರು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂಬ ಸುಂದರ ಹೆಸರನ್ನು ಇಟ್ಟಿದ್ದಾರೆ. ನಾಮಕರಣಕ್ಕೆ ಕುಟುಂಬಸ್ಥರು ಮತ್ತು ಆತ್ಮೀಯ ಬಳಗವನ್ನಷ್ಟೇ ಕರೆದಿದ್ದರು ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳು ಓಡಾಡುತ್ತಿವೆ.

Spread the love

Related Articles

Leave a Reply

Your email address will not be published. Required fields are marked *

Back to top button