Breaking NewsLatestಆರೋಗ್ಯಲೈಫ್ ಸ್ಟೈಲ್

ಕೋಲ್ಡ್ ವಾಟರ್ ಕುಡಿಯುವುದರಿಂದ ಅಡ್ಡಪರಿಣಾಮಗಳೇನು ಗೊತ್ತಾ?

ಬೇಸಿಗೆಯಲ್ಲಿ ಬಿಸಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆ ಬಾಯಾರಿಕೆ ಹೆಚ್ಚಾಗುತ್ತ ಹೋಗುತ್ತದೆ. ಹೀಗಾಗಿ ಇದನ್ನು ತಣಿಸಲು ಕೋಲ್ಡ್ ಮತ್ತು ಚಿಲ್ಡ್ ಪಾನೀಯಗಳು ಐಸ್-ವಾಟರ್ ಕಡೆ ಮುಖ ಮಾಡುತ್ತೇವೆ. ಇದು ಬಾಯಾರಿಕೆಯನ್ನು ತಣಿಸಲು ಸಹಾಯ ಮಾಡುತ್ತದೆ ಮತ್ತು ತ್ವರಿತವಾಗಿ ನಮ್ಮ ದೇಹವನ್ನು ತಂಪಾಗಿಸುವ ಅನುಭವ ನೀಡುತ್ತದೆ.

ಅನೇಕ ಜನರು ತುಂಬಾ ತಣ್ಣನೆಯ ನೀರು ಕುಡಿಯುವುದು ಉತ್ತಮ ಅಭ್ಯಾಸವಲ್ಲ ಎಂದು ನಂಬುತ್ತಾರೆ. ಹಾಗಾದರೆ ಐಸ್ ನೀರನ್ನು ಕುಡಿಯುವುದು ಅಪಾಯಕಾರಿಯೇ..? ಈ ಬಗ್ಗೆ ಏನಂತಾರೆ ತಜ್ಞರು. ಜೀರ್ಣಕ್ರಿಯೆ ಮತ್ತು ಪಚನ ಸೇರಿದಂತೆ ದೇಹದ ಕ್ರಿಯೆಗಳನ್ನು ಬೆಂಬಲಿಸಲು, ಸಾಮಾನ್ಯ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಮತ್ತು ಅಂಗಗಳು ಹಾಗೂ ಅಂಗಾಂಶಗಳನ್ನು ಆರೋಗ್ಯಕರವಾಗಿಡಲು ಪ್ರತಿದಿನ ಸಾಕಷ್ಟು ನೀರನ್ನು ಸೇವಿಸುವುದು ಸೂಕ್ತವಾಗಿದೆ.

ಇದು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ನಿರ್ಜಲೀಕರಣವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗಾದರೆ ತುಂಬಾ ತಣ್ಣನೆಯ ತಣ್ಣೀರು ಕುಡಿಯುವುದು ಎಷ್ಟು ಸರಿ? ಇಲ್ಲಿದೆ ಮಾಹಿತಿ.

ಹೃದಯ ಬಡಿತ: ಹೆಚ್ಚು ತಣ್ಣೀರು ಕುಡಿಯುವುದರಿಂದ ನಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ವರದಿಗಳಲ್ಲಿ ಬಹಿರಂಗವಾಗಿದೆ. ತಜ್ಞರ ಪ್ರಕಾರ ಹೆಚ್ಚು ತಣ್ಣೀರು ಕುಡಿಯುವುದರಿಂದ ಹೃದಯ ಬಡಿತ ಕಡಿಮೆಯಾಗುತ್ತದೆ. ಇದು ದೇಹದ ವಾಗಸ್ ನರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಮಲಬದ್ಧತೆ: ಹೆಚ್ಚು ತಣ್ಣೀರು ನಿರಂತರವಾಗಿ ಕುಡಿಯುತ್ತಿದ್ದರೆ ಈ ಸ್ಥಿತಿಯಲ್ಲಿ ವ್ಯಕ್ತಿಯು ಮಲಬದ್ಧತೆಯ ಸಮಸ್ಯೆಯನ್ನು ಸಹ ಹೊಂದಿರಬಹುದು.

ತಲೆನೋವು: ತಜ್ಞರ ಪ್ರಕಾರ, ಅತಿಯಾದ ತಣ್ಣೀರಿನಿಂದ ನಮ್ಮ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ತಣ್ಣೀರು ಮೆದುಳಿನ ಫ್ರೀಜ್ ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.

ಜೀರ್ಣಾಂಗ ವ್ಯವಸ್ಥೆ: ಹೆಚ್ಚು ತಣ್ಣೀರು ಕುಡಿಯುವುದರಿಂದ ಹೊಟ್ಟೆ ನೋವು ಅಥವಾ ಅಜೀರ್ಣ ಉಂಟಾಗುತ್ತದೆ. ತಣ್ಣೀರು ಹೊಟ್ಟೆಯೊಳಗೆ ಹೋದಾಗ ಅಲ್ಲಿನ ತಾಪಮಾನ ಅದಕ್ಕೆ ಹೊಂದಿಕೆಯಾಗುವುದಿಲ್ಲ

ಬೊಜ್ಜು ಕಡಿಮೆಯಾಗದಿರುವುದು: ಬೊಜ್ಜು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರು ತಣ್ಣೀರು ಕುಡಿಯುವುದನ್ನು ತಪ್ಪಿಸಬೇಕು. ತಣ್ಣೀರು ಕುಡಿಯುವುದರಿಂದ ಕೊಬ್ಬನ್ನು ಸುಡುವಲ್ಲಿ ಸಮಸ್ಯೆ ಉಂಟಾಗುತ್ತದೆ

Spread the love

Related Articles

Leave a Reply

Your email address will not be published. Required fields are marked *

Back to top button