ಪರಿಷತ್ ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನ ಎಲ್ಲಿ ಸೋಲುತ್ತೆ ಅನ್ನೋದನ್ನು ಹೇಳಲಿ; ಡಿಕೆಶಿ ಸವಾಲು

ರಾಮನಗರ: ಯಾರು ಹೇಳಿದ್ದು, 15 ಗೆಲ್ತಾರೆ ಅಂತಾ? ಅವ್ರು 25 ಸ್ಥಾನವನ್ನ ಗೆಲ್ಲಬಹುದು. 15 ಗೆಲ್ಲೋದಾದ್ರೆ ಯಾವುದು 10 ಸೋಲ್ತಾರೆ ಅನ್ನೋದನ್ನ ಹೇಳ್ಬೇಕಲ್ಲ ಅವ್ರು ಎಂದು ವಿಧಾನ ಪರಿಷತ್ತಿನ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗೆಲ್ಲುತ್ತೇವೆ ಎಂಬ ವಿಚಾರಕ್ಕೆ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ರಾಮನಗರ ಜಿಲ್ಲೆ ಕನಕಪುರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ಈಗಲೆ ನಾವು ಇಷ್ಟು ಗೆಲ್ಲುತ್ತೇವೆಂದು ಹೇಳುವ ಬಿಜೆಪಿ ಎಲ್ಲೆಲ್ಲಿ ಸೋಲಾಗುತ್ತದೆಂದು ಧೈರ್ಯವಿದ್ದರೆ ಈಗಲೆ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.
ಇನ್ನು ಜೆಡಿಎಸ್ ಬಿಜೆಪಿ ಸಪೋರ್ಟ್ ಕೊಡೋ ವಿಚಾರಕ್ಕೆ ಸಂಬಂಧಿಸಿದಂತೆ ಅವ್ರು ಯಾವತ್ತು ಕಿತ್ತಾಡ್ತಾರೋ, ಯಾವತ್ತು ಒಂದಾಗ್ತಾರೋ ಅವ್ರಿಗೆ ಗೊತ್ತು. ಅವರ ಪಾರ್ಟಿ ವಿಚಾರಕ್ಕೆ ನಾನು ಯಾಕೆ ಮಾತ್ನಾಡ್ಲಿ. ಸದ್ಯ ನಮ್ಮ ಪಾರ್ಟಿ ಮೆಂಬರ್ಸ್ ಹಾಗೂ ಮತದಾರರಿಗೆ ಮನವಿ ಮಾಡುತ್ತೇನೆ. ಈಗ ಬದಲಾವಣೆಯ ಅವಶ್ಯಕತೆ ಇದೆ. ಈಗಾಗಿ ಯಾವುದೇ ಪಕ್ಷ ಇಲ್ಲದೇ ಗ್ರಾಮ ಪಂಚಾಯಿತಿಯಲ್ಲಿ ಗೆದ್ದೀದ್ದೀರಾ ನಮಗೆ ಬೆಂಬಲಿಸಿ ಎಂದು ಮನವಿ ಮಾಡಲು ಬಂದಿದ್ದೇನೆ ಎಂದರು.
ಅಮಂತ್ರಣ ಕೊಡ್ತೇನೆ ಬರಲಿ:
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ನವರು ಹೈಜಾಕ್ ಮಾಡ್ತಿದ್ದಾರೆ ಎಂಬ ವಿಚಾರಕ್ಕೆ ನಾನು ಯಾವ ಹೈಜಾಕ್ ಮಾಡ್ತಿಲ್ಲ. ಬಂದ್ರೆ ಜೊತೆಯಲ್ಲೇ ಕರೆದುಕೊಂಡು ಹೋಗುತ್ತೇನೆ. ನೀರನ್ನ ನಾನು ಒಬ್ಬನೇ ಬಳಸುವುದಿಲ್ಲ. ಬೆಂಗಳೂರಿನಲ್ಲಿ ಎಲ್ಲರೂ ಬಳಸುತ್ತಾರೆ ಎಂದು ಮೇಕದಾಟು ವಿಚಾರವಾಗಿ ಮಾತನಾಡಿದರು.
ನಾನು ಬಿಜೆಪಿ, ಜೆಡಿಎಸ್ ಹಾಗೂ ಇತರೆ ಹೋರಾಟಗಾರರು, ಸಂಘಗಳಿಗೂ ಆಮಂತ್ರಣ ಮಾಡ್ತೇನೆ ಜೊತೆಲಿ ಬರ್ಲಿ ಅಷ್ಟೇ. ಮೇಕೆದಾಟು ಉಳಿಸಿ ಬೆಂಗಳೂರಿಗೆ ನೀರು ಕೊಡಿ ಎಂದು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಬಿಜೆಪಿ ಅವರದ್ದು ಡಬಲ್ ಎಂಜಿನ್ ಸರ್ಕಾರ ಇದ್ದ ಹಾಗೆ ಮೇಕೆದಾಟು ವಿಚಾರದಲ್ಲಿ ಯಾವುದೇ ಕಾನೂನು ತೊಡಕಿಲ್ಲ ಎಂದು ಆಗ್ಲೆ ಸಿಎಂ ಹೇಳಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಕೊಡಬೇಕು ಎನ್ನುತ್ತಿದ್ದಾರೆ. ಮೇಕೆದಾಟು ನಿರ್ಮಾಣ ಜಾಗದಲ್ಲಿ ನನದು ಕೂಡ ಜಮೀನಿದೆ. ಆದ್ರೆ ನಾವು ಯಾರು ತಕರಾರು ಮಾಡುತ್ತಿಲ್ಲ.
ಅಲ್ಲಿ ಎರಡು ಮೂರು ಹಳ್ಳಿ ಮುಳುಗಿ ಹೋಗುತ್ತವೆ. ರಾಜ್ಯಕ್ಕೆ ಒಳೆಯದಾಗ್ಲಿ ಅಂತ ಅಲ್ಲಿಗೆ ಹೋಗಿ ನ್ಯಾಯ ಪಂಚಾಯಿತಿ ಮಾಡಿದ್ದೇನೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಇದಲ್ಲದೆಯೇ ಬಿಟ್ ಕಾಯಿನ್ ವಿಚಾರ ಮುಗಿದು ಹೋದ ಅಧ್ಯಯ ಎಂಬ ಗೃಹ ಸಚಿವ ಹೇಳಿಕೆಗೆ ಅಸೆಂಬ್ಲಿ ಅಲ್ಲಿ ಟೈಮ್ ಇದೆ. ಅಲ್ಲೇ ಮಾತನಾಡುತ್ತೇನೆ ಎಂದು ತಿಳಿಸಿದರು.
