Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ

ದಿವ್ಯಾ ಹಾಗರಗಿ ಬಂಧನ: ಪ್ರಭಾವಿಗಳ ಎದೆಯಲ್ಲಿ ಢವಢವ! ಹೇಗಿತ್ತು ಗೊತ್ತಾ ಕಾರ್ಯಾಚರಣೆ?

ಕಲಬುರಗಿ: 545 ಪಿಎಸ್ಐ ಹುದ್ದೆ ನೇಮಕಾತಿ‌ ಪರೀಕ್ಷೆ ಅಕ್ರಮದಲ್ಲಿ ತಲೆ ಮರೆಸಿಕೊಂಡಿದ್ದ ದಿವ್ಯಾ ಹಾಗರಗಿ & ಗ್ಯಾಂಗ್ ಮಹಾರಾಷ್ಟ್ರದ ಸೋಲಾಪುರ ಮೂಲದ ಉದ್ಯಮಿ ಆಶ್ರಯದಲ್ಲಿದ್ದರು ಅಂತ ಹೇಳಲಾಗ್ತಿದೆ. ನಿನ್ನೆ ತಡರಾತ್ರಿ ದಿವ್ಯಾ ಮತ್ತು ಗ್ಯಾಂಗನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಆಶ್ರಯ ನೀಡಿದ ಉದ್ಯಮಿ‌ ಸುರೇಶ ಮತ್ತು ಕಾಳಿದಾಸನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ..

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದ ಕೇಂದ್ರಬಿಂದು ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಹಾಗೂ ಉದ್ಯಮಿ ಸುರೇಶ ಸುಮಾರು ದಿನಗಳಿಂದ ಪರಿಚಿತರಾಗಿದ್ದು, ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಉದ್ಯಮಿ ಸುರೇಶ ಮನೆಯಲ್ಲಿ ತನ್ನ ಗ್ಯಾಂಗ್ ಜತೆ ದಿವ್ಯಾ ಅಲ್ಲಿಯೇ ಆಶ್ರಯ ಪಡೆದಿದ್ದಳು ಎಂದು ತಿಳಿದುಬಂದಿದೆ.

ತಲೆ ಮರೆಸಿಕೊಂಡಿದ್ದ ಆರೋಪಿಗಳು 18 ದಿನಗಳಿಂದ ಮೊಬೈಲ್ ಬಳಕೆ ನಿಲ್ಲಿಸಿದ್ದರು. ಎಲ್ಲರ ನಡುವೆ ಒಂದೆ ಒಂದು ಹ್ಯಾಂಡ್ಸೇಟ್ ಬಳಕೆ ಮಾಡಿ ಹತ್ತಾರು ಸಿಮ್ ಬದಲಾವಣೆ ಮಾಡುತ್ತಿದ್ದರು. ಪದೇ ಪದೇ ಆಶ್ರಯ ತಾಣಗಳನ್ನು ಬದಲಾವಣೆ ಮಾಡಿ ಸಿಐಡಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಒಂದು ಮಾಹಿತಿ ಪ್ರಕಾರ 12 ಲಾಡ್ಜ್ ಗಳನ್ನು ಬದಲಾವಣೆ ಮಾಡಿದ್ದರಂತೆ. ಯಾರ ಸಂಪರ್ಕ ಕೂಡಾ ಮಾಡ್ತಿರಲಿಲ್ಲ. ಆದ್ರೆ ಸಿಐಡಿ ಬಲೆಗೆ ಬಿದ್ದ ಜ್ಯೋತಿ ಪಾಟೀಲ್ ಜತೆ ಒಂದೆರಡು ಬಾರಿ ಸಂಪರ್ಕ ಮಾಡಿದ್ದರು. ಇದೆ ಆರೋಪಿಗಳವರೆಗೆ ತಲುಪಲು ಸಿಐಡಿಗೆ ದಾರಿ ಮಾಡಿ ಕೊಟ್ಟಿತ್ತು. ಟವರ್ ಲೋಕೇಷನ್ ಆಧರಿಸಿ ಆರೋಪಿಗಳನ್ನು ತಲುಪಲು ಯಶಸ್ವಿಯಾಗಿದ್ದಾರೆ.

ಬಂ.ಧಿತ ದಿವ್ಯಾ ಹಾಗರಗಿ


ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದ್ರೆ ಜಿಲ್ಲಾ ಬಿಜೆಪಿ ನಾಯಕಿಯೂ ಅದ ಶಾಲೆಯ ಒಡತಿ ದಿವ್ಯಾ ಹಾಗರಗಿ ಶಾಲೆಯ ಹೊರಗಡೆ ನಿಂತು ಕಾವಲು ಕಾಯುತ್ತಿದ್ದಳು. ತಪಾಸಣೆಗೆ ಬರುವವರನ್ನು ತಡೆಯುವ ಕೆಲಸ ಮಾಡುತ್ತಿದ್ದಳು‌. ಒಳಗಡೆ ಅಕ್ರಮ ನಡೆಯುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.


ಇನ್ನು ನಿನ್ನೆ ಬಂಧನಕೊಳಗಾದ ಜ್ಯೋತಿ ಪಾಟೀಲ್ ನಗರಸಭೆಯಲ್ಲಿ ಎಸ್‌ಡಿಎ ಆಗಿದ್ದಾಳೆ. ಈ ಮುಂಚೆ ಬೆಂಗಳೂರು ವಿಧಾನಸೌಧ ಕಚೇರಿಯಲ್ಲಿ ಎಸ್ಡಿಎ ಆಗಿದ್ದ ಜ್ಯೋತಿ ಕಲಬುರಗಿ ಮೂಲದವರದ್ದು ಏನೇ ಕೆಲಸ ತೊಗೊಂಡು ಹೋದ್ರು ಮಾಡಿಸಿ ಕೊಡುತ್ತಿದ್ದಳು. ಎಲ್ಲಾ ಇಲಾಖೆಯಲ್ಲಿ ಆಕೆಗೆ ಪರಿಚಯಸ್ಥರಿದ್ದಾರೆ. ಸಚಿವರು ನಮ್ಮ ಸಂಬಂಧಿ ಆಗಬೇಕು ಅಂತ ಹೇಳಿಕೊಳ್ಳುತ್ತಿದ್ದಳಂತೆ, ಹಣ ಗಳಿಸುವ ದುರಾಸೆಗೆ ಬಿದ್ದು ಸೇಡಂ ಮೂಲದ ಪಿಎಸ್ಐ ಪರೀಕ್ಷಾರ್ಥಿ ಅಭ್ಯರ್ಥಿ ಶಾಂತಾಬಾಯಿ ಹಾಗೂ ಅಕ್ರಮದ ಕಿಂಗ್‌ಪಿನ್ ನಡುವೆ ಮದ್ಯವರ್ತಿಯಾಗಿ ಕೆಲಸ ಮಾಡಿದ್ದಳು. ಶಾಂತಾಬಾಯಿ ಕೇವಲ 13 ಉತ್ತರ ಟಿಕ್ ಮಾಡಿ ಬಂದಿದ್ದಳು. ನಂತರ ಮೇಲ್ವಿಚಾರಕಿಯರು ಉಳಿದ ಉತ್ತರ ಟಿಕ್ ಮಾಡಿದ್ದರು. ಅಕ್ರಮದಿಂದ 101 ಅಂಕ ಪಡೆದು ಶಾಂತಾಬಾಯಿ ಆಯ್ಕೆ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಳು. ಓಎಮ್ಆರ್ ಶೀಟ್ ಪರೀಶಿಲನೆ ವೇಳೆ ಸಂಗತಿ ಹೊರಬೀಳುತ್ತಿದ್ದಂತೆ ಶಾಂತಾಬಾಯಿ ತಲೆ ಮರೆಸಿಕೊಂಡಿದ್ದಳು. ಪುಣೆಯಲ್ಲಿ ದಿವ್ಯಾ ಜತೆ ಶಾಂತಾಬಾಯಿ ಕೂಡಾ ಆರೆಸ್ಟ್ ಆಗಿದ್ದಾಳೆ.


ಅಕ್ರಮ ಪ್ರಕರಣ ಬೆಳಕಿಗೆ ಬಂದ ನಂತರ ತಲೆ ಮರೆಸಿಕೊಂಡಿದ್ದ ದಿವ್ಯಾ & ಗ್ಯಾಂಗ್ ಬರೋಬ್ಬರಿ 18 ದಿನಗಳ ನಂತರ ಸಿಐಡಿ ಬಲೆಗೆ ಬಿದ್ದಿದ್ದಾರೆ. ಸದ್ಯ ದಿವ್ಯಾ ಹಾಗರಗಿಯನ್ನು ಪುಣೆಯಿಂದ ಕಲಬುರಗಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ. ದಿವ್ಯಾ ಬಂಧನದಿಂದ ಹಲವರ ಎದೆಯಲ್ಲಿ ನಡುಕ ಶುರುವಾಗಿದೆ. ದಿವ್ಯಾ ಯಾರ್ಯಾರ ಬಂಡವಾಳ ಬಿಚ್ಚಿಡಲಿದ್ದಾಳೆ ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button