Breaking NewsLatestರಾಷ್ಟ್ರೀಯಸುದ್ದಿ

ಮಧ್ಯರಸ್ತೆಯಲ್ಲೇ ವಿಕಲಚೇತನನಿಗೆ ಥಳಿಸಿ, ಬೈಕ್ ಮುರಿದು ಹಾಕಿದ ದಂಪತಿ

ನವದೆಹಲಿ: ಇತ್ತೀಚಿಗೆ ಮನುಷ್ಯರು ಮಾನವೀಯತೆ ಅನ್ನೊದು ಕಳೆದುಕೊಂಡಿದ್ದಾರೆ. ತಮಗೆ ಇಷ್ಟಬಂದಂತೆ ನಡೆದುಕೊಳುತ್ತಾರೆ. ಇದೀಗ ದೆಹಲಿಯಲ್ಲಿ ಅದೇ ರೀತಿ ಘಟನೆಯೊಂದು ನಡೆದು ಹೋಗಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಝೆವಾರ್ ಪ್ರದೇಶದಲ್ಲಿ ವಿಕಲಚೇತನ ವ್ಯಕ್ತಿಯೊಬ್ಬರಿಗೆ ಗಂಡ- ಹೆಂಡತಿ ಥಳಿಸಿದ ಘಟನೆ ನಡೆದಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಜುಗೇಂದ್ರ ತನ್ನ ಶಾಲೆಯನ್ನು ವಿಕಲಚೇತನನಾದ ಗಜೇಂದ್ರನಿಗೆ ನಡೆಸಲು ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಭಾರತವನ್ನು ಕೊರೊನಾ ಸಾಂಕ್ರಾಮಿಕ ರೋಗವು ಆವರಿಸಿದ್ದರಿಂದ ಆತನಿಗೆ ಶಾಲೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಆತನ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಶಾಲೆ ಸರಿಯಾಗಿ ನಡೆಯುತ್ತಿರಲಿಲ್ಲವಾದ್ದರಿಂದ ಅವರಿಬ್ಬರ ನಡುವೆ ವಾಗ್ವಾದ ನಡೆದು ಈ ಘಟನೆ ನಡೆದಿದೆ. ಆರೋಪಿ ಜುಗೇಂದ್ರ ಗಜೇಂದ್ರನಿಗೆ ಮನಬಂದಂತೆ ಥಳಿಸಿ, ರಸ್ತೆಯಲ್ಲೇ ಆತನ ಸ್ಕೂಟರ್ ಮುರಿದು ಹಾಕಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button