Breaking NewsLatestರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಅಭಿವೃದ್ಧಿ ಡಬಲ್ ಎಂಜಿನ್ ಸರ್ಕಾರದ ಆದ್ಯತೆ: ಪ್ರಧಾನಿ ಮೋದಿ

ಅಲ್ಮೋರಾ (ಉತ್ತರಾಖಂಡ), ಉತ್ತರಾಖಂಡದ ಅಭಿವೃದ್ಧಿ ಡಬಲ್ ಎಂಜಿನ್ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ದಶಕ ಉತ್ತರಾಖಂಡಕ್ಕೆ ಸೇರಿದ್ದು, ಈ ಅವಕಾಶವನ್ನು ಬಿಟ್ಟುಕೊಡಬೇಡಿ ಎಂದು ಅವರು ಮನವಿ ಮಾಡಿದರು. ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಮೋರಾದಲ್ಲಿ ಶುಕ್ರವಾರ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರುವಾರ ಉತ್ತರಪ್ರದೇಶದಲ್ಲಿ ನಡೆದ ಮೊದಲ ಹಂತದ ಮತದಾನವಾಗಿದೆ. ಬಿಜೆಪಿ ದಾಖಲೆ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದು ಸ್ಪಷ್ಟವಾಗಿದೆ ಎಂದರು.

ನಮಗಿಂತ ಹೆಚ್ಚಾಗಿ ಜನತೆ ಈ ಸಮೀಕ್ಷೆಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಂಕಲ್ಪ ಮಾಡಿದ್ದಾರೆ. ಒಳ್ಳೇಯ ಉದ್ದೇಶಗಳನ್ನು ಹೊಂದಿರುವ ಬಿಜೆಪಿಯನ್ನು ಮತದಾರರು ಎಂದಿಗೂ ಕೈಬಿಡುವುದಿಲ್ಲ ಎಂದರು.  

ನಾನು ಉತ್ತರಾಖಂಡ ಜನರ ಶಕ್ತಿ, ಸದುದ್ಧೇಶ, ಪ್ರಾಮಾಣಿಕತೆಯನ್ನು ಗುರುತಿಸುತ್ತೇನೆ. ನೀವು ಪರ್ಯಾಟನೆ ಅಥವಾ ಪಲಾಯನ ಮಾಡುವವರ ಕೈಗೆ ಅಧಿಕಾರ ಹೋಗಬೇಕೆ ಎಂಬುದನ್ನು  ನೀವು ನಿರ್ಧರಿಸಬೇಕು ಎಂದು ಹೇಳಿದರು.

2022ರ ಕೇಂದ್ರ ಬಜೆಟ್ ನಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ರೂಪ್ ವೇಗಳನ್ನು ನಿರ್ಮಿಸಲು ಪರ್ವತಮಾಲಾ ಯೋಜನೆಯನ್ನುಪ ಪ್ರಸ್ತಾಪಿಸಲಾಗಿದೆ. ನಾವು ರಾಜ್ಯದಲ್ಲಿ ಆಧುನಿಕ ರಸ್ತೆಗಳು ಮತ್ತು ಸಾರಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇವೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button