Breaking NewsLatestಜಿಲ್ಲಾ ಸುದ್ದಿದಾವಣಗೆರೆ
ಮೋಸದಿಂದ ಗೆದ್ದರು: ಶಾಮನೂರು ಶಿವಶಂಕರಪ್ಪ ಆಕ್ರೋಶ

ದಾವಣಗೆರೆ: ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯವರು ಮೋಸದಿಂದ ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳಿನ ಸರದಾರರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೋಸದಿಂದ ಅಧಿಕಾರ ವಹಿಸಿಕೊಂಡ ರೀತಿಯಲ್ಲೇ ಇಲ್ಲಿಯೂ ಮಾಡಿದ್ದಾರೆ. ಮೋಸದಿಂದ ಅವರು ಸಹ ಗೆದ್ದಿದ್ದಾರೆಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಮೊಹನ್ ಕೊಂಡಜ್ಜಿ, ಎಲ್ಲೊ ಗೆದ್ದಿರುವ ಎಂಎಲ್ಸಿ ಗಳು ಬೇರೆಡೆ ಬಂದು ಓಟ್ ಮಾಡುವ ಅವಕಾಶವಿದೆ. ಕಾನೂನಿನಲ್ಲಿ ತಪ್ಪಿನ ಕೆಲಸವಾಗಿದೆ.ಈ ರೀತಿ ಮುಂದೆ ಆಗದಂತೆ ನ್ಯಾಯಾಲಯಕ್ಕೆ ಹೋಗುವ ಚಿಂತನೆಯಿದೆ ಎಂದರು.
ಈ ರೀತಿ ಅಧಿಕಾರ ಪಡೆಯಲು ಎಲ್ಲೊ ಬಂದು ಓಟ್ ಮಾಡುವುದು ತಪ್ಪು. ಅದನ್ನು ಎಲ್ಲಾ ಪಕ್ಷದವರು ಮಾಡಿದ್ದೇವೆ. ಇದು ಸರಿಯಲ್ಲ ಮುಂದಿನ ದಿನಗಳಲ್ಲಿ ಇಂತಹ ವರ್ತನೆ ನಿಲ್ಲಬೇಕು ಎಂದೂ ಅವರು ಹೇಳಿದರು.
