Breaking NewsLatestಕೋಲಾರಕ್ರೈಂಜಿಲ್ಲಾ ಸುದ್ದಿ

House Theft: ಕೋಲಾರದಲ್ಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ

ಕೋಲಾರ : ಆದಾಯ ತೆರಿಗೆ ಅಧಿಕಾರಿಗಳೆಂದು ನಕಲಿ ಕಾರ್ಡ್‌ಗಳನ್ನು ತೋರಿಸಿ ಮನೆಯಲ್ಲಿದ್ದವರನ್ನು ಬೆದರಿಸಿ 25 ಲಕ್ಷ ನಗದು ಹಣ ಹಾಗು ಒಂದು ಕೆ ಜಿ ಬಂಗಾರವನ್ನು ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಗರದ ಬೈರೇಗೌಡ ಬಡಾವಣೆಯಲ್ಲಿ ಜರುಗಿದೆ.

ಬೈರೇಗೌಡ ನಗರದ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಎಂಬುವವರ ಮನೆಗೆ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದ ಐವರು ದರೋಡೆಕೋರರು ಮನೆಗೆ ನುಗ್ಗಿ ಆದಾಯ ತೆರಿಗೆ ಅಧಿಕಾರಿಗಳೆಂದು ನಕಲಿ ಕಾರ್ಡ್‌ಗಳನ್ನು ತೋರಿಸಿ ಒಳನುಗ್ಗಿದ್ದಾರೆ. ನಂತರ ಐದು ಜನರ ಕೈಯಲ್ಲಿದ್ದ ಮಿಷನ್ ಗನ್‌ಗಳನ್ನು ತೋರಿಸಿ ಮನೆಯಲ್ಲಿದ್ದ ರಮೇಶ್ ಮತ್ತು ಹೆಂಡತಿ , ಮಕ್ಕಳನ್ನು ಒಂದು ಕಡೆ ಕೂಡಿ ಹಾಕಿ ಅವರಿಗೆ ಮಿಷನ್ ಗನ್‌ಗಳಿಂದ ಭಯ ಇಡಿಸಿ ಅವರಿಂದಲೇ ಹಣ ಮತ್ತು ಬಂಗಾರವನ್ನು ವಶಪಡಿಸಿಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳು ಪರಾರಿಯಾದ ತಕ್ಷಣ ಮನೆಯವರು ಕಿರುಚಿಕೊಂಡಾಗ ಸುತ್ತಮುತ್ತಲಿನ ಮನೆಗಳವರು ಸಹಾಯಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬರುವ ಒಳಗಾಗಿ ಆರೋಪಿಗಳು ಪರಾರಿಯಾಗಿದ್ದಾರೆ. ತಕ್ಷಣ ಪೊಲೀಸರು ನಗರ ಹಾಗು ಹೆದ್ದಾರಿಗಳ ತಪಾಸನಾ ಕಾರ್ಯ ಮುಂದುವರೆಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ ಪಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button