Breaking NewsLatestರಾಜ್ಯಸುದ್ದಿ

12-17 ವರ್ಷದ ಎಲ್ಲ ಮಕ್ಕಳಿಗೂ ಕೋ ವ್ಯಾಕ್ಸಿನ್: ಅದಾರ್ ಪೂನಂವಾಲ

ಪುಣೆ: ಕೋವಿಡ್‌ ನಿರೋಧಕ ಲಸಿಕೆಯಾಗಿರುವ ಕೊವೊವ್ಯಾಕ್ಸ್‌ 12 -17 ವರ್ಷದ ಎಲ್ಲರಿಗೂ ಲಭ್ಯವಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಂವಾಲ ಅವರು ಸ್ಪಷ್ಟಪಡಿಸಿದ್ದಾರೆ.

ಮಕ್ಕಳಿಗೆ ಇನ್ನೊಂದು ಲಸಿಕೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದು, ಅದರಂತೆ ಇದನ್ನು ಉತ್ಪಾದಿಸಲಾಗಿದೆ. ಶೇ. 90ರಷ್ಟು ಸಾಮರ್ಥ್ಯದ ಈ ಲಸಿಕೆಯನ್ನು ಯೂರೋಪ್‌ನಲ್ಲೂ ಬಳಸಲಾಗುತ್ತಿದೆ ಎಂದು ಪೂನಂವಾಲ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಲಸಿಕೀಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಮಂಡಳಿಯು ಕಳೆದ ವಾರ ಈ ಲಸಿಕೆಯನ್ನು 12-17 ವರ್ಷದ ಮಕ್ಕಳಿಗೆ ನೀಡಲು ಅನುಮತಿ ನೀಡಿದೆ. ಇದೇ ಸಂದರ್ಭದಲ್ಲಿ, ಕೊವೊವ್ಯಾಕ್ಸ್‌ ಲಸಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಕೋವಿನ್‌ ಆಯಪ್‌ನಲ್ಲಿ ಅವಕಾಶ ನೀಡಲಾಗಿಲ್ಲ ಎಂದೂ ಕೆಲವರು ಟ್ವೀಟ್‌ ಮೂಲಕ ದೂರಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button