Breaking NewsLatestರಾಜಕೀಯರಾಜ್ಯರಾಷ್ಟ್ರೀಯವಿದೇಶ

ಚೀನಾದಲ್ಲಿ ಕೊರೊನಾ ಅಟ್ಟಹಾಸ: ಮತ್ತೆ ಲಾಕ್ ಡೌನ್ ಘೋಷಣೆ

ಸಿಎಂ ಇಬ್ರಾಹಿಂ ರಾಜೀನಾಮೆಗೆ ಮುಹೂರ್ತ ಫಿಕ್ಸ್

ಕೆಲವೊಂದು ಕಾರಣಗಳಿಂದ ಈ ಹಿಂದೆ ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿದ್ದ ಸಿ ಎಂ ಇಬ್ರಾಹಿಂ ಇಂದು ಅಧಿಕೃತವಾಗಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ. ರಾಜೀನಾಮೆ ಪತ್ರವನ್ನು ಕೆಪಿಸಿಸಿ ಕಚೇರಿಗೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ತೊರೆಯಲಿದ್ದಾರೆ. ಈ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಬಾರಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದಲ್ಲಿಯೇ ಇರ್ತಾರೆ ಎಂದು ಹೇಳಿದ್ದರು. ಆದರೆ ಇದೀಗ ಕಾಂಗ್ರೆಸ್ ತೊರೆಯಲು ಸಿದ್ದವಾಗಿರೋ ಇಬ್ರಾಹಿಂ 12 ಗಂಟೆಗೆ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ. ಜೊತೆಗೆ ನಿನ್ನೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಈಗಿನವರು ಯಾರು ಮೂಲ ಕಾಂಗ್ರೆಸಿಗರೇ ಅಲ್ಲ ಎಂದು ತಮ್ಮ ಅಸಮದಾನ ಹೊರ ಹಾಕಿದ್ದರು.

ತಾಯಿಯನ್ನ ಭೇಟಿ ಮಾಡಿದ ಮೋದಿ: ಅಮ್ಮನ ಕೈತುತ್ತು ಸವಿದ ಮಗ

ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ತಾಯಿಯನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು. ಅಹಮದಾಬಾದ್ ನ ಗಾಂಧಿನಗರದಲ್ಲಿ ತಾಯಿ ಹೀರಾಬೆನ್ ರನ್ನ ಭೇಟಿ ಮಾಡಿ ಕೆಲ ಸಮಯ ತಾಯಿಯ ಜೊತೆ ಕಳೆದರು. ಬಳಿಕ ಮಗನಿಗೆ ತಾಯಿ ಸಿಹಿ ತಿನ್ನಿಸಿದ್ರು. ರಾತ್ರಿ ಅಮ್ಮನ ಜೊತೆ ಊಟ ಮಾಡಿದ ಮೋದಿ ಅಮ್ಮನ ಆರೋಗ್ಯದ ಕುರಿತಾಗಿ ವಿಚಾರಿಸಿದ್ರು. ಅಮ್ಮ, ಮಗನ ಭೇಟಿಯ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಮೋದಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಸಿಎಂ ಇಬ್ರಾಹಿಂ ರಾಜೀನಾಮೆಗೆ ಮುಹೂರ್ತ ಫಿಕ್ಸ್

ಚೀನಾದಲ್ಲಿ ಮತ್ತೆ ಲಾಕ್ ಡೌನ್ ಘೋಸಿಸಲಾಗಿದೆ. ಚೀನಾ ಎರಡು ವರ್ಷಗಳಳ್ಲಿ ಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನ ಶುಕ್ರವಾರ ವರದಿ ಮಾಡಿದೆ. ಸುಮಾರು 9 ಮಿಲಿಯನ್ ಜನ ಸಂಖ್ಯೆ ಇರುವ ಚಾಂಗ್ ಚುನ್ ಅನ್ನು ಲಾಕ್ ಡೌನ್ ಮಾಡಲು ಆದೇಶಿಸಿದೆ. ನಿವಾಸಿಗಳು ಮನೆಯಲ್ಲೇ ಇದ್ದು ಮೂರು ಸುತ್ತಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜೊತೆಗೆ ಅನಿವಾರ್ಯವಲ್ಲದ ವ್ಯವಹಾರಗಳನ್ನ ಮುಚ್ಚಬೇಕು ಎಂದು ಆದೇಶಿಸಿದೆ. ಜೊತೆಗೆ ಸಾರಿಗೆ ಸಂಪರ್ಕವನ್ನ ಸ್ಥಗಿತಗೊಳಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button