Breaking NewsLatestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ನವೀನ್ ಮೃತ ದೇಹ ತರುವ ಕಾರ್ಯ ನಡೆಯುತ್ತಿದೆ: ಸಿಎಂ

ಹುಬ್ಬಳ್ಳಿ: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಉಕ್ರೇನನಲ್ಲಿ ಸುಮಾರು 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಈಗಾಗಲೇ ಹಲವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದ್ದು, ಉಳಿದವರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಲಾಗುತ್ತಿದೆ. ಜೊತೆಗೆ ಯುದ್ಧದಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ನವೀನ್ ಮೃತ ದೇಹ ತರುವ ಪ್ರಯತ್ನ ಕೂಡಾ ಮಾಡಲಾಗುತ್ತಿದೆ, ಆದಷ್ಟು ಬೇಗ ನವೀನ್ ಮೃತದೇಹವನ್ನ ಕರೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಕ್ರೇನ್​ನಲ್ಲಿ‌ ಸಿಲುಕಿದ್ದ ಕುಂದಗೋಳ ಮೂಲದ ವಿದ್ಯಾರ್ಥಿನಿ ಚೈತ್ರಾ ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕಾರ್ಯ ಆಗುತ್ತಿದೆ. ಉಕ್ರೇನ ಬಾರ್ಡರ್‌ಗೆ ಹೊಂದಿಕೊಂಡಿರುವ 4-5 ರಾಷ್ಟ್ರಗಳೊಂದಿಗೆ ಮೋದಿಯವರು ಉತ್ತಮ ಸಂಬಂಧ ಹೊಂದಿದ್ದಾರೆ. ಬಾರ್ಡರ್ ದೇಶಗಳ ಸಹಕಾರದೊಂದಿಗೆ ಪ್ರತಿಯೊಬ್ಬರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಅಲ್ಲದೆ ನವೀನ್ ಮೃತ ದೇಹವನ್ನ ಸಹ ಕರೆತರುವ ಕಾರ್ಯ ಮಾಡಲಾಗುವುದು. ಯುದ್ಧದ ಸ್ಥಿತಿಯನ್ನ ನೋಡಿಕೊಂಡು ಮೃತ ದೇಹವನ್ನ ತರುವ ಕಾರ್ಯ ನಡೆಯುತ್ತೆ ಎಂದಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಉಕ್ರೇನ್​ನಲ್ಲಿ ಮೂರನೇ ವರ್ಷದ ಮೆಡಿಕಲ್ ಓದುತ್ತಿದ್ದರು. ಈ ವಿದ್ಯಾರ್ಥಿನಿ ಕೂಡಾ ಅಲ್ಲಿಯ ಬಂಕರ್ ನಲ್ಲಿ ಸಿಲುಕಿದ್ರು. ಅಲ್ಲಿಂದ 4-5 ಕಿಮೀ ರಸ್ತೆಯ ಮೂಲಕ ನಡೆದುಕೊಂಡು ಬಂದು, ಅಲ್ಲಿಂದ ರಾಯಭಾರಿ ಸಹ ಬಹಳ ಸಪೋರ್ಟ್ ಮಾಡಿ ಕರೆದುಕೊಂಡು ಬಂದಿದೆ. ಚೈತ್ರಾ ಕುಟುಂಬ ತುಂಬಾನೇ ಭಯಗೊಂಡಿದ್ದು, ಅಂತಹ ಸಮಯದಲ್ಲಿ ಜಿಲ್ಲಾಡಳಿತ ಅವರ ಕುಟುಂಬಕ್ಕೆ ಧೈರ್ಯ ತುಂಬಿತು. ದೇವರ ಆಶೀರ್ವಾದದಿಂದ ಚೈತ್ರಾ ವಾಪಸ್ ಬಂದಿದ್ದಾರೆ. ಸದ್ಯ ಜಿಲ್ಲೆಯ ನಾಲ್ಕು ಜನ ವಿದ್ಯಾರ್ಥಿಗಳ ಪೈಕಿ ಇಬ್ಬರು ಇಂದು ಬಂದಿದ್ದಾರೆ. ಇನ್ನಿಬ್ಬರನ್ಮು ಕೂಡಾ ಕರೆತರಲಾಗುವುದು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button