Breaking NewsLatestಕ್ರೈಂಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಗಾಂಜಾ ಸೇವೆನೆ ಕುರಿತ ಹೇಳಿಕೆ: ಪುನೀತ್ ಕೆರೆಹಳ್ಳಿ ವಿರುದ್ಧ ದೂರು

ಬೆಂಗಳೂರು: ಗಾಂಜಾ ಸೇದುವುದು ನಮ್ಮ ಹಕ್ಕು. ಅದು ಹಿಂದೂಗಳ ಸಂಪ್ರದಾಯ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಪುನೀತ್ ಕೆರೆಹಳ್ಳಿ ವಿರುದ್ದ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ, ಮೇಲ್ಮನೆ ಸದಸ್ಯ ಪಿ.ಆರ್.ರಮೇಶ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಬೆಂಗಳೂರು ನಗರ ಪೊಲಿಸ್ ಆಯುಕ್ತ ಕಮಲ್ ಪಂತ್ ಅವರಿಗೆ ವಿಡಿಯೋ ಸಹಿತ ದೂರು ಸಲ್ಲಿಸಿದ್ದಾರೆ. ಪುನೀತ್ ಕರೆಹಳ್ಳಿ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ಯುವಜನರಿಗೆ ಗಾಂಜಾ ಸೇವನೆ ಮಾಡುವಂತೆ ಪ್ರಚೋದಿಸುವ ಹೇಳಿಕೆ ಇದಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.

ಯುವಜನ ಮಾದಕ ವಸ್ತುವಸ್ತು ಉಪಯೋಗಿಸಿ ಅವರ ಜೀವನ ದಿಕ್ಕೆಡುತ್ತಿದೆ. ಅಂತಹುದರ ನಡುವೆ ಈ ವಿಡಿಯೋ ಗಾಂಜಾ ಸೇವನೆಯನ್ನು ಪ್ರಚೋದಿಸುವಂತಿದೆ. ಈ ಹಿನ್ನೆಲೆಯಲ್ಲಿ ಈ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ.  

Spread the love

Related Articles

Leave a Reply

Your email address will not be published. Required fields are marked *

Back to top button