Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ರಾಮನವಮಿ ಶೋಭಾಯಾತ್ರೆ ಪ್ರಾರಂಭ: ಸಾವಿರಾರು ರಾಮಭಕ್ತರು ಭಾಗಿ

ಕಲಬುರಗಿ: ರಾಮನವಮಿ ಹಿನ್ನೆಲೆ ರಾಮಮೂರ್ತಿಯ ಭವ್ಯವಾದ ಶೋಭಯಾತ್ರೆಗೆ ಚಾಲನೆ ನೀಡಲಾಗಿದೆ. ಕಲಬುರಗಿ ನಗರದ ರಾಮತೀರ್ಥ ದೇಗುಲದ ಬಳಿ 15 ಅಡಿ ಎತ್ತರದ ರಾಮನ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಮನ ಭಕ್ತರು ಭಾಗಿಯಾಗುತ್ತಿದ್ದಾರೆ. ರಾಮತೀರ್ಥ ದೇವಸ್ಥಾನದಿಂದ ಹೊರಡುವ ಶೋಭಾಯಾತ್ರೆ ಚೌಕ್ ವೃತ್ತದವರೆಗೆ ಸಾಗಲಿದೆ. ಮೆರವಣಿಗೆ ವೇಳೆ ಅಹಿತಕರ ಘಟನೆಗಳು ಜರುಗದಂತೆ ಖಾಕಿ ಸರ್ಪಗಾವಲು ಹಾಕಿದ್ದಾರೆ.
ಮೆರವಣಿಗೆಯಲ್ಲಿ ರಾಮಮೂರ್ತಿ ಜೊತೆ ಹಿಂದೂ ಕಾರ್ಯಕರ್ತ ಹರ್ಷಾ, ಶಿವು ಉಪ್ಪಾರ ಭಾವಚಿತ್ರ ಹಾಗೂ ಇನ್ನೊಂದಡೆ ನಟ ಪುನೀತ್ ರಾಜಕುಮಾರ್, ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬಿಪಿನ್ ರಾವತ್, ಗಾನಕೋಗಿಲೆ ಲತಾ ಮಂಗೇಶ್ಕರ್ ಭಾವಚಿತ್ರ ಗಮನ ಸೆಳೆಯುತ್ತಿವೆ.
