Breaking NewsLatestಕ್ರೈಂಜಿಲ್ಲಾ ಸುದ್ದಿದಾವಣಗೆರೆರಾಜ್ಯಸುದ್ದಿ

ರಸ್ತೆಯಲ್ಲಿ ಕಾಲೇಜು ಹುಡುಗರ ಕಿರಿಕ್: ವಿಡಿಯೋ ವೈರಲ್!

ದಾವಣಗೆರೆ: ಕಾಲೇಜು ಯುವಕರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ದಾವಣಗೆರೆ ನಗರದ  ಎಂಸಿಸಿ ಬಿ ಬ್ಲಾಕ್ ನಲ್ಲಿ ನಡೆದಿದೆ‌. ಕ್ಷುಲ್ಲಕ ಕಾರಣಕ್ಕೆ ಒಂದು ಗುಂಪಿನ ವಿದ್ಯಾರ್ಥಿಗಳ ಮೇಲೆ ಮತ್ತೊಂದು ಗುಂಪಿನವರು ಸ್ಥಳೀಯ ಪುಂಡರನ್ನು ಕರೆಸಿಕೊಂಡು ಗಲಾಟೆ ಮಾಡಿದ್ದು, ಓರ್ವನನ್ನ ಹಿಡಿದು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ‌.

ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದು, ನಡುರಸ್ತೆಯಲ್ಲಿ ಓರ್ವ ವಿದ್ಯಾರ್ಥಿಗೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ರಸ್ತೆಯಲ್ಲಿ ಯುವಕರು ಹೊಡೆದಾಡಿಕೊಂಡರೂ  ನೋಡುತ್ತಾ ಸುಮ್ಮನೆ ಸಾರ್ವಜನಿಕರು ಸಾಗಿದರು. ಹಲ್ಲೆ ಸಂಬಂಧ ಕೆಲವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button