Breaking NewsLatestಜಿಲ್ಲಾ ಸುದ್ದಿಮಂಡ್ಯ

ಬೈಕ್ ಮೇಲೆ ತೆಂಗಿನ ಮರ ಬಿದ್ದು ಬಾಲಕಿ ಸ್ಥಳದಲ್ಲೇ ಸಾವು

ಮಂಡ್ಯ: ಭಾರೀ ಬಿರುಗಾಳಿಗೆ ಕಾರು ಹಾಗೂ ಬೈಕ್ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೊಡ್ಡಪಾಳ್ಯದೊಡ್ಡಿ ಬಳಿಯ ಶ್ರೀರಂಗಪಟ್ಟಣ-ಬನ್ನೂರು ರಸ್ತೆಯಲ್ಲಿ ನಡೆದಿದೆ.

ಕೆ ಆರ್ ಎಸ್ ಗ್ರಾಮದ ನಾಗರಾಜು ಹಾಗೂ ಪ್ರೇಮ ದಂಪತಿಯ ಪುತ್ರಿ ಪ್ರಿಯಾಂಕಾ (12) ಮೃತ ಬಾಲಕಿ. ನಾಗರಾಜು, ಪ್ರೇಮ ದಂಪತಿ ಪುತ್ರಿ ಹಾಗೂ ಪುತ್ರನೊಂದಿಗೆ ಬೈಕ್ ನಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ದೊಡ್ಡಪಾಳ್ಯದೊಡ್ಡಿ ಬಳಿ ಬರುತ್ತಿದ್ದರಂತೆ ಬಿರುಗಾಳಿ ಹೆಚ್ಚಾಗಿದ್ದು ಪರಿಣಾಮ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರ ಬೈಕ್ ಮೇಲೆ ಬಿದ್ದಿದೆ.

ಘಟನೆಯಲ್ಲಿ ಬೈಕ್ ಮುಂದೆ ಕುಳಿತಿದ್ದ ನಾಗರಾಜು ಹಾಗೂ ಪುತ್ರಿ ಪ್ರಿಯಾಂಕಾಗೆ ಗಂಭೀರ ಗಾಯಗಳಾಗಿದ್ದು ನಾಗರಾಜ್, ಪ್ರೇಮ ಹಾಗೂ ಹಾಗೂ ಪುತ್ರ ಚೇತನ್ ರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆಯೇ ಪ್ರಿಯಾಂಕ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button