Breaking NewsLatestಜಿಲ್ಲಾ ಸುದ್ದಿಮೈಸೂರುರಾಜ್ಯಸುದ್ದಿ

ಡಿಸೆಂಬರ್ 18 ರಂದು ವಿಷ್ಣುವರ್ಧನ್ ಸ್ಮಾರಕ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ

ಮೈಸೂರು: ಎಲ್ಲವೂ ಅಂದುಕೊಂಡಂತೆ ನಡೆದರೆ, ದಿವಂಗತ ನಟ ಡಾ,ವಿಷ್ಣುವರ್ಧನ್ ಅವರ ಬಹುನಿರೀಕ್ಷಿತ ಸ್ಮಾರಕವು ಅವರ ಹುಟ್ಟೂರಾದ ಮೈಸೂರಿನಲ್ಲಿ ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್.18 ರಂದು ಸ್ಮಾರಕ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ.

11 ಕೋಟಿ ರೂ ವೆಚ್ಚದಲ್ಲಿ ಎಚ್.ಡಿ.ಕೋಟೆ ರಸ್ತೆಯ ಉದ್ಬೂರು ಕ್ರಾಸ್ ಬಳಿ ಹಾಲಾಳು ಗ್ರಾಮದ ಬಳಿ ಐದು ಎಕರೆ ಜಾಗದಲ್ಲಿ 1,450 ಚದರ ಮೀಟರ್ನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ವಿಷ್ಣುವರ್ಧನ್ ನಿಧನದ 13 ವರ್ಷಗಳ ನಂತರ ಸ್ಮಾರಕವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತುದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಸೆಪ್ಟೆಂಬರ್ 15, 2020 ರಂದು ಸ್ಮಾರಕಕ್ಕೆ ಅಡಿಪಾಯ ಹಾಕಿದ್ದರು. ಸ್ಮಾರಕವು ನಟನ 20 ಅಡಿ ಪ್ರತಿಮೆಯನ್ನು ಒಳಗೊಂಡಿದೆ. ನಟನ ಸಿನಿ ಪಯಣ ಗ್ಯಾಲರಿ, ಪುಸ್ತಕಗಳು ಮತ್ತು ಇತರ ಬೃಹತ್ ಸಂಗ್ರಹಗಳನ್ನು ಇಲ್ಲಿ ಇರಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button