Breaking NewsLatestಕಲಬುರ್ಗಿಜಿಲ್ಲಾ ಸುದ್ದಿಸುದ್ದಿ

ನಗರ ಪೊಲೀಸ್ ಕಮಿಷನರ್ ಪತ್ನಿ ವಿರುದ್ಧ ಹಣಕ್ಕೆ ಬೇಡಿಕೆ!

ಕಲಬುರಗಿ: ನಗರ ಪೊಲೀಸ್​ ಕಮಿಷನರ್​ ಡಾ.ವೈ.ಎಸ್ ರವಿಕುಮಾರ್ ಅವರ ಪತ್ನಿ ರೂಪಾಲಿ ಅವರು 3 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು.

ಹಣ ಕೊಡದೇ ಇದ್ದಿದ್ದಕ್ಕಾಗಿ ನನ್ನನ್ನು ಗಡಿಪಾರು ಮಾಡಿದ್ದಾರೆ ಎಂದು ಚಿತ್ತಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಣಿಕಂಠ ರಾಠೋಡ್ ಆರೋಪ ಮಾಡಿದ್ದಾರೆ.

ಸೆಪ್ಟೆಂಬರ್ 30 ರಂದು ರೂಪಾಲಿ ಸೇರಿದಂತೆ ಅವರ ತಂಡದಿಂದ ದಾಂಡಿಯಾ ನೈಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಬೈ ಮೂಲದ ಇವೆಂಟ್ ಕಂಪನಿಗೆ ಮೂರು ಲಕ್ಷ ನೀಡಿದ್ದೆ. ಅದರ ಹಣವನ್ನು ಇನ್ನು ನೀಡಿಲ್ಲ. ಅನಂತರ ಮತ್ತೆ ಮೂರು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು, ತಾನು ಹಣ ಕೊಡದೇ ಇದ್ದಾಗ ಅವರ ಪತಿ ನಗರ ಪೊಲೀಸ್​ ಕಮಿಷನರ್​ ಡಾ.ವೈ ಎಸ್ ರವಿಕುಮಾರ್ ನನ್ನನ್ನು ಸುಳ್ಳು ಪ್ರಕರಣ ದಾಖಲಿಸಿ ಗಡಿಪಾರು ಆದೇಶ ಮಾಡಿದ್ದರು. ನನ್ನ ಹಣ ನನಗೆ ನೀಡಬೇಕು, ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎನ್ನುತ್ತಿದ್ದಾರೆ ಮಣಿಕಂಠ ರಾಠೋಡ್.

Spread the love

Related Articles

Leave a Reply

Your email address will not be published. Required fields are marked *

Back to top button