ರವಿ ಚನ್ನಣ್ಣನವರ್ ಸಿಐಡಿಯಿಂದ ಎತ್ತಂಗಡಿ, ಈ ಐಪಿಎಸ್ ಅಧಿಕಾರಿ ಈಗ ವಾಲ್ಮೀಕಿ ನಿಗಮದ ಎಂಡಿ

ಬೆಂಗಳೂರು: ವಿವಾದಕ್ಕೆ ಎಡೆಯಾಗಿದ್ದ ಸಿಐಡಿ ಎಸ್.ಪಿ.ರವಿ ಡಿ.ಚನ್ನಣ್ಣವನರ್ ಎತ್ತಂಗಡಿ ಮಾಡಿರುವ ಸರ್ಕಾರ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದೆ. ಇವರ ಜತೆಗೆ 8 ಇತರೆ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಸಿಐಡಿ ಎಸ್ ಪಿ ಭೀಮ್ ಶಂಖರ್ ಗುಳೇದ್ ಅವರು ಬೆಂಗಳೂರು ಪೂರ್ವ ವಲಯದ ಡಿಸಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಎಸಿಬಿ ಎಸ್ ಪಿ ಅಬ್ದುಲ್ ಅಹದ್, ಕೆಎಸ್ಸಾರ್ಟಿಸಿ ಭದ್ರತೆ ಮತ್ತು ವಿಚಕ್ಷಣಾ ದಳದ ನಿರ್ದೆಶಕರನ್ನಾಗಿ ವರ್ಗಾಯಿಸಲಾಗಿದೆ. ಕೊಪ್ಪಳ್ಳ ಎಸ್ ಪಿ ಶ್ರೀಧರ್ ಡಿಸಿಆರ್ ಇ ಎಸ್ ಪಿಯಾಗಿ ವರ್ಗಾಯಿಸಲಾಗಿದೆ. ಎಸಿಬಿ ಎಸ್ ಪಿ ಅರುನಾಗ್ ಶುಗಿರಿ ಅವರನ್ನು ಕೊಪ್ಪಳ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.
ಕಾರಾಗೃಹ ಇಲಾಖೆ ಎಸ್ ಪಿಯಾಗಿದ್ದ ಟಿ.ಪಿ.ಶಿವಕುಮಾರ್, ಚಾಮರಾಜನಗರ ಎಸ್ ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಚಾಮರಾಜನಗರ ಎಸ್ ಪಿಯಾಗಿದ್ದ ದಿವ್ಯಾ ಸಾರಾ ಥಾಮಸ್ ಮೈಸೂರು ಪೊಲೀಸ್ ಅಕಾಡೆಮಿ ಉಪನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಸ್ಥಳ ನಿರೀಕ್ಷೆಯಲ್ಲಿದ್ದ ಐಪಿಎಸ್ ಅಧಿಕಾರಿ ಡೆಕ್ಕಾ ಸುರೇಶ್ ಬಾಬು, ಬೀದರ್ ಎಸ್ ಪಿಯಾಗಿ ಹಾಗೂ ಬೀದರ್ ಎಸ್ ಪಿಯಾಗಿದ್ದ ನಾಗೇಶ್ ಡಿಎಲ್ ಅವರನ್ನು ಬೆಂಗಳೂರು ಸಿಐಡಿ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.
