ಹಿಂದೂ ಮಹಾಸಾಗರದ 19 ರಾಷ್ಟ್ರಗಳೊಂದಿಗೆ ಚೀನಾ ಸಭೆ! ಭಾರತಕ್ಕಿಲ್ಲ ಆಹ್ವಾನ

ನವದೆಹಲಿ: ಕೋವಿಡ್ ನಿಂದ ಚೀನಾ ಇನ್ನೂ ಹೊರ ಬಂದಿಲ್ಲ. ಕೋವಿಡ್ ಕಾರಣದಿಂದ ಚೀನಾದಲ್ಲಿ ಲಾಕ್ ಡೌನ್ ಹೇರಲಾಗಿದ್ದು ಇದರಿಂದ ಸಾಕಷ್ಟು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆಯೂ ಭಾರತವನ್ನು ಬದಿಗಿರಿಸಿ, ಐಒಆರ್ (ಹಿಂದೂ ಮಹಾಸಾಗರದ) ನ 19 ರಾಷ್ಟ್ರಗಳೊಂದಿಗೆ ಚೀನಾ ಸಭೆ ನಡೆಸಿದೆ.
ಈ ಸಭೆಯಲ್ಲಿ ಭಾರತದ ಅನುಪಸ್ಥಿತಿ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಬೀಜಿಂಗ್ ನ ಮೂಲಗಳ ಪ್ರಕಾರ ಭಾರತಕ್ಕೆ ಈ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿರಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.
ನ.21 ರಂದು ಚೀನಾದ ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಪಟ್ಟ ಚೀನಾ ಅಂತಾರಾಷ್ಟ್ರೀಯ ಬೆಳವಣಿಗೆಗಳ ಸಹಕಾರ ಸಂಸ್ಥೆ ಈ ಸಭೆಯನ್ನು ಆಯೋಜಿಸಿತ್ತು. “ಹಂಚಿಕೆಯ ಅಭಿವೃದ್ಧಿ: ನೀಲಿ ಆರ್ಥಿಕತೆಯ ದೃಷ್ಟಿಕೋನದಿಂದ ಸಿದ್ಧಾಂತ ಮತ್ತು ಅಭ್ಯಾಸ” ಎಂಬ ಥೀಮ್ ನ ಅಡಿಯಲ್ಲಿ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಈ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಇಂಡೋನೇಶ್ಯಾ, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್, ಕೀನ್ಯಾ, ಮೊಜಾಂಬಿಕ್, ತಾಂಜಾನಿಯಾ, ಸೀಶೆಲ್ಸ್, ಮಡಗಾಸ್ಕರ್, ಮಾರಿಷಸ್, ಜಿಬೌಟಿ, ಆಸ್ಟ್ರೇಲಿಯಾ ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳ 3 ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ ಭಾರತಕ್ಕೆ ಆಹ್ವಾನ ನೀಡಿರಲಿಲ್ಲ. ಕಳೆದ ವರ್ಷವೂ ಚೀನಾ ಕೆಲವು ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಕೋವಿಡ್-19 ಲಸಿಕೆ ಸಹಕಾರದ ವಿಷಯವಾಗಿ ಭಾರತವನ್ನು ಹೊರತುಪಡಿಸಿ ಸಭೆ ನಡೆಸಿತ್ತು.
ಈಗ ಸಭೆ ನಡೆಸಿರುವ ಸಿಐಡಿಸಿಎಗೆ ನೇತೃತ್ವ ವಹಿಸಿರುವುದು ಮಾಜಿ ಉಪ ವಿದೇಶಾಂಗ ಸಚಿವ ಹಾಗೂ ಭಾರತದ ರಾಯಭಾರಿ ಲುವೋ ಝೌಹುಯಿ. ಸಂಘಟನೆಯ ಅಧಿಕೃತ ವೆಬ್ ಸೈಟ್ ನ ಪ್ರಕಾರ ಸಿಐಡಿಸಿಎ ನಾಯಕ ಲುವೋ ಝೌಹುಯಿ ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಈಗ ಸಭೆ ನಡೆಸಿರುವ ಸಿಐಡಿಸಿಎಗೆ ನೇತೃತ್ವ ವಹಿಸಿರುವುದು ಮಾಜಿ ಉಪ ವಿದೇಶಾಂಗ ಸಚಿವ ಹಾಗೂ ಭಾರತದ ರಾಯಭಾರಿ ಲುವೋ ಝೌಹುಯಿ. ಸಂಘಟನೆಯ ಅಧಿಕೃತ ವೆಬ್ ಸೈಟ್ ನ ಪ್ರಕಾರ ಸಿಐಡಿಸಿಎ ನಾಯಕ ಲುವೋ ಝೌಹುಯಿ ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಈ ವರ್ಷದ ಜನವರಿ ತಿಂಗಳಲ್ಲಿ ಶ್ರೀಲಂಕಾಗೆ ಭೇಟಿ ನೀಡಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಹಿಂದೂ ಮಹಾಸಾಗರದ ದ್ವೀಪ ದೇಶಗಳ ಅಭಿವೃದ್ಧಿಗಾಗಿಯೇ ಪ್ರತ್ಯೇಕ ವೇದಿಕೆ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ್ದರು.
