Breaking NewsLatestರಾಷ್ಟ್ರೀಯಸುದ್ದಿ

ಕಾಳಿಚರಣ್ ಗೆ ಜಾಮೀನು ನೀಡಿದ ಛತ್ತೀಸ್ ಗಢ ಹೈ ಕೋರ್ಟ್

ರಾಯ್ ಪುರ: ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ನನ್ನ ಬಂಧಿಸಲಾಗಿತ್ತು. ಅವರು ಸುಮಾರು 3 ತಿಂಗಳು ಕಾಲ ಸೆರೆವಾಸದಲ್ಲಿದ್ದರು. ಛತ್ತೀಸ್ ಗಢ ಹೈಕೋರ್ಟ್ ಇದೀಗ ಕಾಳಿಚರಣ್ ಗೆ ಜಾಮೀನು ನೀಡಿದೆ.

ಕಳೆದ ಡಿಸೆಂಬರ್ 30 ರಂದು ರಾಯ್ ಪುರದಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಕಾಳಿಚರಣ್ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತು ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ರನ್ನು ಬಂಧಿಸಲಾಗಿತ್ತು. ಈ ಕುರಿತು ದೇಶದಲ್ಲಿ ಭಾರಿ ಚರ್ಚೆ ಕೂಡ ಆಗಿತ್ತು. ಕಾಳಿಚರಣ್ ವಕೀಲರು ಜಾಮೀನಿಗಾಗಿ ಓಡಾಡುತ್ತಿದ್ದರೂ ಸಿಕ್ಕಿರಲಿಲ್ಲ. ಆದರೆ ಮೂರು ತಿಂಗಳ ನಂತರ ಛತ್ತೀಸ್ಗಢ ಹೈಕೋರ್ಟ್ ಜಾಮೀನು ನೀಡಿದೆ.

Related Articles

Leave a Reply

Your email address will not be published. Required fields are marked *

Back to top button