Breaking NewsLatestಮೆಟ್ರೋರಾಜಕೀಯರಾಜ್ಯ

ನಾಯಕತ್ವ ಬದಲಾವಣೆ ಶತಸಿದ್ಧ: ಬಿಜೆಪಿ ಬಂಡಾಯ ಶಾಸಕ ಯತ್ನಾಳ್

ಬೆಂಗಳೂರು : ದುಷ್ಟರ ಸಂಹಾರ ಆಗುತ್ತೆ, ಆ ಸಮಯವೂ ಬರುತ್ತೆ, ಟಿಪ್ಪು ಸುಲ್ತಾನ್ ಮನೆ ಎಲ್ಲಿದೆ, ಮೊಘಲರ ಮನೆ ಎಲ್ಲಿದೆ, ನಾಶವಾಗಿಲ್ವಾ ಹಾಗೆಯೇ ಇಲ್ಲೂ ದುಷ್ಟರ ಸಂಹಾರ ಆಗಲಿದೆ. ಕಾಲ ಕೂಡಿ ಬರಬೇಕು ಎಂದು ಸಿಎಂ ಬಿಎಸ್​ವೈ ಕುಟುಂಬದ ವಿರುದ್ದ ಶಾಸಕ ಬಸನಗೌಡ ಪಾಟೀಲ್​​​ ಯತ್ನಾಳ್ ಬಾಂಬ್​​ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಯಡಿಯೂರಪ್ಪನವರೇ ನಮ್ಮ ನಾಯಕ ಅಂತ ಹೊರಗಡೆ ಹೇಳ್ತಾರೆ. ಒಳಗಡೆ ಹೋಗಿ ಯಾವಾಗ ಬೇಕಾದರೂ ಸಿಎಂನ ಚೇಂಜ್ ಮಾಡಿ ಅಂತಾರೆ. ಆದಷ್ಟು ಬೇಗ ಚೇಂಜ್ ಮಾಡಿ ಅಂತ ಹೇಳ್ತಾರೆ, ಹೊರಗೆ ಬಂದು ಜೈಕಾರ ಹಾಕ್ತಾರೆ. ಆ ತರಹ ನಾನಲ್ಲ ಎಂದು ತಿಳಿಸಿದರು.

ನಾಯಕತ್ವ ಬದಲಾವಣೆ ವಿಚಾರಕ್ಕೆ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ ಮಗ ಇದ್ದರೆ ಹಾಗೇ ಹೇಳಬೇಕು. ಏನೇನೋ ಮಾಡ್ತಾರೆ. ಅದರ ಪರಿಣಾಮ ಮುಂದೆ ಆಗುತ್ತೆ. ಹಾಲಿ ಸಿಎಂ ಜೈಲಿಗೆ ಹೋದ ಉದಾಹರಣೆ ಇದೆ. ಈ ರೀತಿ ಆಗಬಾರದು ಎಂಬುದು ನಮ್ಮ ಆಶಯ. ನಮ್ಮ ನಾಯಕರು ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಆತ್ಮವಿಶ್ವಾಸ ಇದೆ. ಆ ಆತ್ಮವಿಶ್ವಾಸ ಫಲ ಕೊಡುತ್ತದೆ. ದುಷ್ಪರಿಗೆ ಒಂದು ಕಾಲ ಇದ್ದೇ ಇರುತ್ತದೆ. ಕ್ಷಮಾಪಣೆ ಇರುತ್ತದೆ ಆದರೆ ಪದೇ ಪದೇ ತಪ್ಪು ಸಹಿಸಲ್ಲ ಎಂದರು.‘

ಇದನ್ನೂ ಓದಿ : ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ: ಬಿ ವೈ ವಿಜಯೇಂದ್ರ

2 ವರ್ಷ ಸಿಎಂ ಮುಗಿದ ಅಧ್ಯಾಯ ಎಂಬ ವಿಜಯೇಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮುಖ್ಯಮಂತ್ರಿ ಮಗ ಆಗಿದ್ರೆ ನಾನೂ ಹಾಗೇ ಹೇಳುತ್ತಿದ್ದೆ. ರಾಜಕಾರಣದಲ್ಲಿ ಎಲ್ಲವೂ ನಡೆಯುತ್ತದೆ. ಅವರ ಮಗ ಆಗಿರೋದ್ರಿಂದ ಅವರು ಹೇಳ್ತಾರೆ. ರಾಜಕಾರಣದಲ್ಲಿ ಏನೆಲ್ಲಾ ನಡೆಯಲ್ಲ ಎಂದು ತಿಳಿಸಿದರು.

ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿಲ್ಲ :

ಪಂಚಮಸಾಲಿ ಮೀಸಲಾತಿ ಹೋರಾಟ ನಿಂತಿಲ್ಲ. ಆ ಹೋರಾಟದಲ್ಲಿ ಒಬ್ಬ ರಾಜಕಾರಣಿ ನಗ್ನನಾಗಿದ್ದಾನೆ. ಅವನು ತನ್ನ ಉದ್ಧಾರಕ್ಕೆ ಸಮಾಜವನ್ನು ಬಳಸಿಕೊಂಡಿದ್ದಾನೆ. ಇದರ ಹಿಂದೆ ಒಬ್ಬ ಉದ್ಯಮಿ ಮಂತ್ರಿ ಇದ್ದಾನೆ. ಅವನನ್ನ ಹೋಗಿ ಕೇಳಿ ಹೇಳ್ತಾನೆ. ಏನಾಯ್ತು ಹೇಗಾಯ್ತು ಅನ್ನೋದನ್ನ ಹೇಳ್ತಾನೆ ಎಂದು ಪರೋಕ್ಷವಾಗಿ ನಿರಾಣಿ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ನಾನು ಯೋಗೇಶ್ವರ್ ಭೇಟಿಯಾಗಿದ್ದೆ, ಪ್ರವಾಸೋದ್ಯಮ ಇಲಾಖೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೆ. ಅವರು ದೆಹಲಿಗೆ ಏನೆಲ್ಲಾ ಉತ್ತರ ಪತ್ರಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಕಾಗದದ ಉತ್ತರವೋ ಬೇರೆ ಉತ್ತರವೋ ತಿಳಿದಿಲ್ಲ. ದೆಹಲಿಯಲ್ಲಿ ಕೆಲವರ ಉತ್ತರ ಪತ್ರಿಕೆ ರೆಡಿ ಆಗ್ತಿದೆ, ಪೇಪರ್ ನಲ್ಲಿ ಉತ್ತರ ರೆಡಿ ಆಗ್ತಿದೆಯೋ ಇಲ್ಲ ಸಿಡಿಯಲ್ಲಿ ರೆಡಿ ಆಗ್ತಿದೆಯೋ ಗೊತ್ತಿಲ್ಲ ಎಂದು ತಿಳಿಸಿದರು.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಯತ್ನಾಳ್ ಆಕ್ರೋಶ

ರಾಜ್​​ ಉಸ್ತುವಾರಿ ಅರುಣ್ ಸಿಂಗ್ ಬಂದಾಗ ರಾಜಮರ್ಯಾದೆ ಕೊಡ್ತಾರೆ. ಪಾಪ ನೀವೇ ತೋರಿಸಿದ್ರಲ್ಲ ಹಾರ ತುರಾಯಿ ಸನ್ಮಾನ, ಯಾರಿಗೆ ಕುರ್ಚಿ ಉಳಿಸಿಕೊಳ್ಳಬೇಕೋ ಅವರು ಮಾಡಿದ್ದಾರೆ. ಅಧಿಕಾರ ಉಳಿಸಿಕೊಳ್ಳೋಕೆ ಮಾಡಿದ್ದಾರೆ. ಅರುಣ್ ಸಿಂಗ್ ಗೆ ರಾಜಮರ್ಯಾದೆ ಮಾಡಿದ್ದಾರೆ. ನಾವ್ಯಾಕೆ ಮಾಡಬೇಕು. ಅರುಣ್ ಸಿಂಗ್ ಬಂದು‌ಹೋದ್ರೆ ಎಲ್ಲವೂ ಸರಿಹೋಯ್ತಾ. ನಮ್ಮ ರಾಷ್ಟ್ರೀಯ ನಾಯಕರಿಗೂ ಸೋರ್ಸ್ ಇದೆ. ರಾಜ್ಯ, ರಾಷ್ಟ್ರದಲ್ಲಿ ಇಂಟಿಲೆಜೆನ್ಸ್ ಇದೆ. ಅವರಿಂದ ಎಲ್ಲವನ್ನೂ ತೆಗೆದುಕೊಳ್ತಾರೆ. ಅರುಣ್ ಸಿಂಗ್ ಗೆ ಯಾಕಷ್ಟು ಮಹತ್ವ ಕೊಡ್ತಾರೋ ಗೊತ್ತಿಲ್ಲ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button