Breaking NewsLatestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಸಂಸತ್ತಿನ ಅಧಿವೇಶನ ನಡೆಯಲು ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಧಾರವಾಡ : ಕಳೆದ ನಾಲ್ಕು ದಿನಗಳಿಂದ ಸಂಸತ್ತಿನ ಅಧಿವೇಶನ ನಡೆಸಲಾಗುತ್ತಿದೆ. ಆದರೆ ಅಧವೇಶನ ನಡೆಸಲು ವಿರೋಧ ಪಕ್ಷಗಳು ಪದೇ ಪದೇ ಅಡ್ಡಿ ಮಾಡಿ ಅಧಿವೇಶನ ನಡೆಸಲು ಬೀಡುತ್ತಿಲ್ಲ ಎಂದು ಕೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ದಿನ ಹಾಗೂ ಗುರುವಾದಂದು ವಿಶೇಷವಾಗಿ ಪೋನ್ ಹಾಗೂ ಡಾಟಾ ಕದ್ದಲಿಕೆ ಆರೋಪ ಮಾಡಿ, ಕಾಂಗ್ರೆಸ್ ನಾಯಕರು ಅಧಿವೇಶನ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಈಗಾಗಲೇ ವಿರೋಧ ಪಕ್ಷದ ನಾಯಕರು ಮಾಡುತ್ತಿರು ಆರೋಪ ಕುರಿತು, ಪೆಗಾಸಸ್ ಸಾಫ್ಟ್​​ವೇರ್ ಕಂಪನಿಯರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಪೋನ್ ನಂಬರ್ ಇದೇ ಎಂದ ಮಾತ್ರಕ್ಕೆ ಟ್ಯಾಪ್ ಮಾಡಲಾಗಿದೆ ಎಂಬ ರಾಹುಲ್ ಗಾಂಧಿಯದು ಆರೋಪ ಚೈಲ್ಡಿಸ್ ಆ್ಯಂಡ್ ಬೆಸ್ ಲೆಸ್ ಆರೋಪವಾಗಿದೆ ಎಂದು ಹರಿಹಾಯ್ದರು.

ರಾಹುಲ್ ಗಾಂಧಿ ಅವರ ಪೋನ್‌ಟ್ಯಾಪ್ ಆಗಿದಿಯೋ ಅಥವಾ ಇಲ್ವೋ ಜೊತೆಗೆ ಅವರ ಕಾಲ್ ಮಾತುಕತೆ ರೆಕಾರ್ಡ್ ಆಗಿದಿಯೋ ಇಲ್ವೋ ಎಂದು ತಿಳಿಯುವುದಕ್ಕೆ, ಮೊದಲು ರಾಹುಲ್ ಗಾಂಧಿ ಅವರ ದೂರು ನೀಡಿ ಪೋನ್ ತನಿಖಾಧಿಕಾರಿಗಳಿಗೆ ನೀಡಬೇಕು. ತನಿಖೆಯ ನಂತರ ರಾಹುಲ್ ಗಾಂಧಿಯವರ ಪೋನ್ ಹಾಗೂ ಡಾಟಾ ಕದ್ದಾಲಿಕೆ ಆಗಿದಿಯೋ ಇಲ್ಲವೋ ಎಂಬುವುದು ತಿಳಿಯಬಹುದಾಗಿದೆ ಸಲಹೆ ನೀಡಿದರು.

ಈಗಾಗಲೇ ನಾನು ಸೇರಿದಂತೆ ನಮ್ಮ ಪ್ರಧಾನಿಗಳು ಸರ್ವಪಕ್ಷ ಸಭೆಯಲ್ಲಿ ಉತ್ತಮವಾದ ಹಾಗೂ ಒಳ್ಳೆಯ ಜನಪರ ವಿಷಯಗಳ ಚರ್ಚೆ ಮಾಡುವ ಕುರಿತು ಈ ಹಿಂದೆ ಹೇಳಿ ಮನವಿ ಕೂಡಾ ಮಾಡಲಾಗಿತ್ತು. ಆದರೆ ಅಧಿವೇಶನ ಆರಂಭಾಗುತ್ತಿದ್ದಂತೆ ಈಗ ಬೇಸ್ ಲೇಸ್ ಆರೋಪ ಮಾಡಿ ಅಧಿವೇಶನ ಸಮಯ ಹಾಳು ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಯಾವುದೇ ಒಂದು ಭ್ರಷ್ಟಾಚಾರ ಆರೋಪ ಬಂದಿಲ್ಲ. ಈ ಹಿಂದೆ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ಇದ್ದಾಗ ಪ್ರತಿದಿನ ಒಂದೊಂದು ಆರೋಪಗಳು ಕೇಳಿ ಬರುತ್ತಿದ್ದವು ಎಂದರು.

ಕೇಂದ್ರ ನಾಯಕರ ಮಧ್ಯೆ ಏನು ಮಾತುಕತೆ ಆಗಿದೆ ಗೊತ್ತಿಲ್ಲ

ರಾಜ್ಯ ರಾಜಕಾರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಮತ್ತು ಕೇಂದ್ರ ನಾಯಕರ ಮಧ್ಯೆ ಏನು ಮಾತುಕತೆ ನಡೆದಿದೆ ಹಾಗೂ ನಡೆಯುತ್ತಿದೆ ಅದರ ವಿವರ ನನಗೆ ಗೊತ್ತಿಲ್ಲ. ವರಿಷ್ಠರ ಜೊತೆಗೆ ಏನೇ ಮಾತುಕತೆ ನಡೆದಿದ್ದರು, ಅದೂ ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರಿಗೆ ಮಾತ್ರ ಗೊತ್ತು. ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಬಗ್ಗೆ ಯಾರು ನನ್ನ ಜೊತೆ ಚರ್ಚೆ ಮಾಡಿಲ್ಲ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ, ನರೇಂದ್ರ ಮೋದಿ‌ ಇದ್ದಾರೆ ನಿರ್ಧಾರ ಅವರು ತೆಗೆದುಕೊಳ್ಳುತ್ತಾರೆ ಎಂದ ಅವರು, ಮುಖ್ಯಮಂತ್ರಿ ನೀವು ಆಗ್ತೀರಾ..? ಎಂಬ ಪ್ರಶ್ನೆಗೆ ನೀವೆ ಹೇಳಬೇಕು ಎಂದು ನಕ್ಕು ಸುಮ್ಮನಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button