Breaking NewsLatestರಾಷ್ಟ್ರೀಯ
ಜಲಾಂತರ್ಗಾಮಿ ನೌಕೆ ಕುರಿತ ಗೌಪ್ಯ ಮಾಹಿತಿ ಬಹಿರಂಗ; ಇಬ್ಬರು ನೇವಿ ಕಮಾಂಡರ್‌ಗಳು ಸೇರಿ 6 ಮಂದಿ ವಿರುದ್ಧ ಸಿಬಿಐ ಚಾರ್ಜ್ಶೀಟ್

ನವದೆಹಲಿ: ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಬಗ್ಗೆ ಗೌಪ್ಯ ಮಾಹಿತಿಯನ್ನು ಗೊತ್ತಿಲ್ಲದ ಯಾವುದೋ ವ್ಯಕ್ತಿಗಳಿಗೆ ರವಾನಿಸಿದ ಆರೋಪದ ಮೇಲೆ ಇಬ್ಬರು ಕಮಾಂಡರ್‌ಗಳು ಮತ್ತು ಇಬ್ಬರು ನಿವೃತ್ತ ನೌಕಾಪಡೆ ಅಧಿಕಾರಿಗಳು ಸೇರಿದಂತೆ ಆರು ಜನರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ.
ಈ ಆರು ಜನರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು ಭಾರತದ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಕುರಿತಂತೆ ಗೌಪ್ಯ ವಾಣಿಜ್ಯ ಮಾಹಿತಿಯನ್ನು ಸಂಬಂಧವೇ ಇಲ್ಲದವರಿಗೆ ರವಾನಿಸುತ್ತಿದ್ದರು ಎಂದು ಸಿಬಿಐ ಹೇಳಿದೆ.
ನೌಕಾಪಡೆಯ ನಿವೃತ್ತ ಅಧಿಕಾರಿಗಳಾದ ರಣದೀಪ್ ಸಿಂಗ್ ಮತ್ತು ಎಸ್ ಜೆ ಸಿಂಗ್ ಅವರನ್ನು ಸೆಪ್ಟೆಂಬರ್ 3ರಂದು ಸಿಬಿಐ ಬಂಧಿಸಿದ ಬಳಿಕ ಇದೆಲ್ಲಾ ವಿಚಾರ ಬೆಳಕಿಗೆ ಬಂದಿದೆ.
