Breaking NewsLatestರಾಜ್ಯರಾಷ್ಟ್ರೀಯಸುದ್ದಿ
ಸಚಿವ ಸಂಪುಟ ವಿಸ್ತರಣೆ: ಕುತೂಹಲ ಮೂಡಿಸಿರುವ ವಿಜಯೇಂದ್ರ ದೆಹಲಿ ಭೇಟಿ

ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಮಾಡುವ ಹೊತ್ತಲೇ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ಹೊರಟಿದ್ದಾರೆ.
ಹೈಕಮಾಂಡ್ ನಾಯಕರಿಂದ ಬುಲಾವ್ ಬಂದ ಬೆನ್ನಲ್ಲೆ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ನಿನ್ನೆ ಹೈಕಮಾಂಡ್ ನಾಯಕರು ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದರು. ಅದರಂತೆ ಬಿ ವೈ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ಸಂಪುಟ ಪುನಾರಚನೆ ಕಸರತ್ತಿನ ನಡುವೆ ವಿಜಯೇಂದ್ರ ದೆಹಲಿಯಾತ್ರೆ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇತ್ತ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುವ ಮುನ್ನವೇ ಸಚಿವರ ದಂಡು ದೆಹಲಿಗೆ ತೆರಳಿದೆ. ರಾಜ್ಯ ಸಚಿವ ಸಂಫುಟದ 10ಕ್ಕೂ ಹೆಚ್ಚು ಸಚಿವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
