ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೀಡಿದ ಸಿ.ಪಿ.ಯೋಗೇಶ್ವರ

ರಾಮನಗರ: ಶಿವಮೊಗ್ಗದಲ್ಲಿ ಹತ್ಯೆಯಾದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ 1 ಲಕ್ಷ ರೂ. ನೆರವನ್ನು ನೀಡಿದ್ದಾರೆ. ಮೃತ ಯುವಕನ ತಾಯಿ ಪದ್ಮ ಅವರ ಖಾತೆಗೆ ಆರ್‌ಟಿಜಿಎಸ್ ಮೂಲಕ ಯೋಗೇಶ್ವರ್ ಹಣ ರವಾನಿಸಿದ್ದಾರೆ.
ಶಿವಮೊಗ್ಗದಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಈ ಹಿಂದೆ ಯೋಗೇಶ್ವರ್ ರಾಮನಗರದಲ್ಲಿ ನಡೆದ ಪ್ರತಿಭಟನೆಯ ವೇಳೆ ಘೋಷಣೆ ಮಾಡಿದ್ದರು. ತಾವು ಹೇಳಿದಂತೆ ಇದೀಗ ಹಣವನ್ನು ಯೋಗೇಶ್ವರ ಯುವಕನ ಕುಟುಂಬಕ್ಕೆ ನೀಡಿದ್ದಾರೆ.
ಕುಟುಂಬವನ್ನು ಸಾಕಬೇಕಾದ ಆಧಾರ ಸ್ಥಂಭ ಏಕಾಏಕಿ ಸಾವಿಗೀಡಾದ ಹಿನ್ನೆಲೆಯಲ್ಲಿ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಕುಟುಂಬದ ಸಂಕಷ್ಟಕ್ಕೆ ಇಡೀ ನಾಡು ಮರುಗಿತ್ತು. ಹಲವಾರು ಮಂದಿ ನೆರವು ನೀಡುವುದಾಗಿ ಘೋಷಣೆ ಮಾಡಿದ್ದರು. ಯೋಗೇಶ್ವರ್ ಸಹ ಇದೇ ರೀತಿ ಮೃತ ಯುವಕನ ಕುಟುಂಬಕ್ಕೆ ಒಂದು ಲಕ್ಷ ರೂ. ಹಣವನ್ನು ನೆರವು ನೀಡುವುದಾಗಿ ಘೋಷಿಸಿ ಅದರಂತೆ ಮೃತ ಯುವಕನ ಕುಟುಂಬಕ್ಕೆ ನೆರವು ನೀಡಿದ್ದಾರೆ. ಯೋಗೇಶ್ವರ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
