Breaking NewsLatestಕೃಷಿಕೊಡಗುಜಿಲ್ಲಾ ಸುದ್ದಿರಾಜ್ಯವಿಶೇಷಸುದ್ದಿ
ಕಾಫಿ ಬೆಳೆಗಾರರಿಗೆ ಬಂಪರ್ ಕೊಡುಗೆ: ಮುಖ್ಯಮಂತ್ರಿ ಘೋಷಣೆ

ಕೊಡಗು: ಕಾಫಿ ಬೆಳೆಗಾರರ ಬಹುಕಾಲದ ಹೋರಾಟಕ್ಕೆ ಜಯ ಸಿಕ್ಕಿದೆ. ಉಚಿತ ವಿದ್ಯುತ್ ಪಡೆಯಲು ನಡೆಸಿದ ಹೋರಾಟಗಳಿಗೆ, ಧರಣಿಗಳಿಗೆ ಫಲ ಎಂಬಂತೆ ಕಾಫಿ ಬೆಳೆಗಾರರಿಗೆ 10HPಯವರೆಗೆ ಉಚಿತ ವಿದ್ಯುತ್ ನೀಡುವಂತೆ ಬೊಮ್ಮಾಯಿ ಸರ್ಕಾರದಿಂದ ಘೋಷಣೆಯಾಗಿದೆ.
ವಿಧಾನಸಭೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶೂನ್ಯ ವೇಳೆಯಲ್ಲಿ ಈ ವಿಷಯದ ಕುರಿತು ಪ್ರಸ್ತಾಪ ಮಾಡಿದ್ದಾರೆ. ಕಾಫಿ ಬೆಳೆಗಾರರು 10 ಹೆಚ್.ಪಿ.ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಚರ್ಚಿಸಲು ಅವಕಾಶ ಕೋರಿದ ಸಂದರ್ಭ ಚರ್ಚೆಗೆ ಅವಕಾಶ ನೀಡಲಾಗಿತ್ತು.
ಈ ಸಂದರ್ಭ ಶಾಸಕ ರಂಜನ್ ಜೊತೆ ಈ ವಿಚಾರದ ಬಗ್ಗೆ ಚರ್ಚೆಗೆ ಶಾಸಕರಾದ ಸಿ.ಟಿ. ರವಿಯವರು, ಕುಮಾರಸ್ವಾಮಿ ಕೆ.ಜಿ ಬೋಪಯ್ಯರವರು ಮುಂದಾಗಿ ಉಚಿತ ವಿದ್ಯುತ್ ಕಲ್ಪಿಸುವಂತೆ ಒತ್ತಡ ಹೇರಿದರು. ನಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದರು.
