Breaking Newsಸಿನಿಮಾಸೆಲೆಬ್ರಿಟಿ
ಬಾಲಿವುಡ್ ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ

ಖ್ಯಾತ ನಿರೂಪಕಿ ಹಾಗೂ ಬಾಲಿವುಡ್ ನಟಿ ಮಂದಿರಾ ಬೇಡಿ ಪತಿ ನಿರ್ಮಾಪಕ ರಾಜ್ ಕೌಶಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜ್ ಕೌಶಲ್ ನಿಧನಕ್ಕೆ ಬಾಲಿವುಡ್‌ನ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
ಅವರಿಗೆ 49 ವರ್ಷ ವಯಸ್ಸಾಗಿತ್ತು. ರಾಜ್ ಕೌಶಲ್ ಸ್ಕ್ರಿಪ್ಟ್ ರೈಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಿರ್ದೇಶನಕ್ಕೆ ಕಾಲಿಟ್ಟ ರಾಜ್ ಕೌಶಲ್, ಆಂಥೋನಿ ಕೌನ್ ಹೈ, ಶಾದಿ ಕಾ ಲಡ್ಡು, ಪ್ಯಾರ್ ಮೇ ಕಭೀ ಕಭೀ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಅದೇ ರೀತಿ ಮೈ ಬ್ರದರ್ ನಿಖಿಲ್, ಶಾದಿ ಕಾ ಲಡ್ಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
