Breaking NewsLatestರಾಷ್ಟ್ರೀಯಸುದ್ದಿ
ತುರ್ತು ಲ್ಯಾಂಡಿಂಗ್ ವೇಳೆ ಇಬ್ಭಾಗವಾದ ಬೋಯಿಂಗ್ ವಿಮಾನ

ಕ್ಯಾಲಿಪೋರ್ನಿಯಾ: ತುರ್ತು ಲ್ಯಾಂಡಿಂಗ್ ವೇಳೆ ಕಾರ್ಗೋ ವಿಮಾನ ಕ್ರ್ಯಾಶ್ ಲ್ಯಾಂಡಿಂಗ್ ಆಗಿ ಇಬ್ಬಾಗವಾದ ಘಟನೆ ಕೋಸ್ಟರಿಕಾದಲ್ಲಿ ನಡೆದಿದೆ.
ಬೋಯಿಂಗ್- 757 ವಿಮಾನ ಎರಡು ಭಾಗವಾಗಿದ್ದು, ಜುವಾನ್ ಸಾಂಟಾಮಾರಿಯಾ ವಿಮಾನ ನಿಲ್ದಾಣದ ರನ್ ವೇನಲ್ಲೇ ಭಾರಿ ಅವಘಡ ಸಂಭವಿಸಿದೆ. ಡಿಹೆಚ್ ಎಲ್ ಸಂಸ್ಥೆ ನಿರ್ವಹಿಸುತ್ತಿದ್ದ ಬೋಯಿಂಗ್ ವಿಮಾನ ಗ್ವಾಟೆಮಾಲಾಗೆ ಹೊರಟ್ಟಿತ್ತು.ಈ ವೇಳೆ ವಿಮಾನದಲ್ಲಿ ತಾಂತ್ರೀಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ತುರ್ತು ಲ್ಯಾಂಡಿಂಗ್ ಮಾಡಲು ಸೂಚನೆ ನೀಡಲಾಗಿತ್ತು.
