Breaking NewsLatestರಾಷ್ಟ್ರೀಯಸುದ್ದಿ

ಭಾರತ್ ಜೋಡೋ ಯಾತ್ರೆ’ಗೆ ಆಹ್ವಾನದ ಬಗ್ಗೆ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರನ್ನು ಬಿಜೆಪಿ ಲೇವಡಿ

ಮುಂಬೈ : ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ಗೆ ಆಹ್ವಾನದ ಬಗ್ಗೆ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರನ್ನು ಬಿಜೆಪಿ ಲೇವಡಿ ಮಾಡಿದೆ.

ನಾಂದೇಡ್ ತಲುಪಿದಾಗ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ಒಪ್ಪಿಕೊಂಡಿದ್ದಕ್ಕಾಗಿ ಶಿವಸೇನಾ ಅಧ್ಯಕ್ಷ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಬಿಜೆಪಿ ತೀವ್ರವಾಗಿ ಟೀಕಾ ಪ್ರಹಾರ ನಡೆಸಿದ್ದು,ಉದ್ಧವ್ ಠಾಕ್ರೆ ಅವರದ್ದು “ಮುಹ್ ಮೇ ರಾಮ್, ಬಗಲ್ ಮೇ ರಾಹುಲ್”(ಬಾಯಲ್ಲಿ ರಾಮ ಮಂತ್ರ, ಬಗಲಿನಲ್ಲಿ ರಾಹುಲ್) ಪಾಲಿಸಿ ಎಂದು ಬಿಜೆಪಿಯ ಮುಖ್ಯ ವಕ್ತಾರ ಕೇಶವ್ ಉಪಾಧ್ಯ ಹೇಳಿದ್ದಾರೆ.

‘ಹಿಂದುತ್ವ ರಾಜಕಾರಣದಲ್ಲಿ ರಾಹುಲ್ ಗಾಂಧಿ ಶ್ರೀರಾಮನ ಸ್ಥಾನವನ್ನು ಪಡೆದಿದ್ದಾರೆ. ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಸಲುವಾಗಿ ಮನೆ ಬಿಟ್ಟು ಹೋಗಿಲ್ಲ, ಆದರೆ ಈಗ ಅವರು ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಹೊರಟಿದ್ದಾರೆ” ಎಂದು ಕೇಶವ್ ಉಪಾಧ್ಯ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button